ಮಂಗಳೂರು : ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕದ್ರಿ ಶ್ರೀ ಮಂಜುನಾಥ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಕ್ಷೇತ್ರದ ವತಿಯಿಂದ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಬೆಳಗ್ಗೆ 11.10ರ ವೇಳೆಗೆ ಕದ್ರಿಗೆ ಆಗಮಿಸಿದ ಮುಖ್ಯಮಂತ್ರಿ 11.20ರ ಸುಮಾರಿಗೆ ದೇವಳ ಪ್ರವೇಶಿಸಿದರು. ಚೆಂಡೆ, ಕೊಂಬು, ವಾದ್ಯ ಹಾಗೂ ಬ್ಯಾಂಡ್‌ಗಳೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು. ಯಕ್ಷಗಾನ ವೇಷಧಾರಿಗಳೂ ಸ್ವಾಗತ ಕೋರಿದರು.
ಡಿ.ಕೆ. ಶಿವಕುಮಾರ್ ಅವರು ಮಹಾಗಣಪತಿ ಹಾಗೂ ದುರ್ಗಾಪರಮೇಶ್ವರಿ ದೇವರ ದರ್ಶನ ಪಡೆದು ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಕದ್ರಿ ಮಂಜುನಾಥ ದೇವರ ಸನ್ನಿಧಿಗೆ ತೆರಳಿದರು.
ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ತೆರೆದ ಬಸ್‌ನಲ್ಲಿ ಸಚಿವರ ಪ್ರಯಾಣವನ್ನು ರದ್ದುಗೊಳಿಸಿ, ಕೆಎಸ್‌ಆರ್‌ಟಿಸಿ ಐರಾವತ ಕ್ಲಬ್ ಕ್ಲಾಸ್ ಬಸ್‌ನಲ್ಲಿ ಸಂಪುಟ ಸಭೆಯ ಸ್ಥಳಕ್ಕೆ ತೆರಳಲು ವ್ಯವಸ್ಥೆ ಮಾಡಲಾಯಿತು. ಅದರಂತೆ ಐರಾವತ ಬಸ್ ಕದ್ರಿಗೆ ಆಗಮಿಸಿತು. ಸುಮಾರು 11.50ರ ವೇಳೆಗೆ ಮುಖ್ಯಮಂತ್ರಿ ಕದ್ರಿಯಿಂದ ಸಂಪುಟ ಸಭೆಯತ್ತ ನಿರ್ಗಮಿಸಿದರು.

0 Comments