Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸೆ.27ರಂದು ಶಿವಶಕ್ತಿ ಕ್ಲಬ್ಬಿನ‌ ನೇತೃತ್ವದಲ್ಲಿ ಮಂಟಮೆ ಗದ್ದೆಯಲ್ಲಿ ಕಿದೂರು ಗ್ರಾಮೋತ್ಸವ

ಕಳತ್ತೂರು : ಶಿವಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ.) ಕಿದೂರು ಇದರ ಆಶ್ರಯದಲ್ಲಿ ಕಿದೂರು ಗ್ರಾಮೋತ್ಸವವು ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ಸೆಪ್ಟೆಂಬರ್ 27ರಂದು ಬೆಳಗ್ಗೆ 8 ಗಂಟೆಯಿಂದ ಕಿದೂರು ಮಂಟಮೆ ಗದ್ದೆಯಲ್ಲಿ ನಡೆಯಲಿವೆ.

ಬೆಳಗ್ಗೆ 8 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಿವಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಚಂದ್ರರಾಜ್ ಶೆಟ್ಟಿ ಕಾಜೂರು ವಹಿಸಲಿದ್ದು, ಕಿದೂರು ಶ್ರೀ ಮಹಾದೇವ ಕ್ಷೇತ್ರದ ಕಿದೂರು ಗುತ್ತು ಮೊಕ್ತೇಸರ ಮನೋರಾಜ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಎಲ್ ಪಿ ಶಾಲೆ ಕಿದೂರು ಮುಖ್ಯೋಪಾಧ್ಯಾಯ ಮೋಹನ್ ನಾರಾಯಣ್, ಸುಫಲ ಚಂದ್ರ ನಾಯಕ್, ಕ್ಯಾಪ್ಕೊ ನಿರ್ದೇಶಕ ಸತೀಶ್ಚಂದ್ರ ಭಂಡಾರಿ, ಧಾರ್ಮಿಕ ಮುಂದಾಳು ಕೆ.ಸಿ. ಮೋಹನ್, ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಧಾಕೃಷ್ಣ ರೈ ಮಡ್ವ, ಸ್ಪಾಡ್ ಸಂಸ್ಥೆ ಬೆಂಗಳೂರು ನಿರ್ದೇಶಕ ಜೀವನಾಥ್ ಕುಮಾರ್ ಕೆ. ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ತುಳು ಹಾಗೂ ಕನ್ನಡ ಚಲನಚಿತ್ರಗಳ ನಿರ್ದೇಶಕ, ಲೇಖಕ ಮತ್ತು ನಟ, ‘ಸು ಫ್ರಂ ಸೋ’ ಖ್ಯಾತಿಯ ಜೆ.ಪಿ. ತೂಮಿನಾಡು ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.

ಬೆಳಗ್ಗೆ 8.30ರಿಂದ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. 5ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಬಾಲಕ–ಬಾಲಕಿಯರ 50 ಮೀಟರ್ ಓಟ, 9ನೇ ತರಗತಿಯಿಂದ ಪಿಯುಸಿವರೆಗೆ ಬಾಲಕ–ಬಾಲಕಿಯರ 100 ಮೀಟರ್ ಓಟ, ಪುರುಷರು ಹಾಗೂ ಮಹಿಳೆಯರಿಗೆ 100 ಮೀಟರ್ ಓಟ, ವಿದ್ಯಾರ್ಥಿನಿಯರಿಗೆ ಸಂಗೀತ ಕುರ್ಚಿ, ಸಾರ್ವಜನಿಕರಿಗೆ ಗೋಣಿ ಚೀಲ ಓಟ, ಮೂರು ಕಾಲಿನ ಓಟ ಹಾಗೂ ಘಟಸ್ಫೋಟ, ಮಹಿಳೆಯರಿಗೆ ಪಾಸಿಂಗ್ ಬಾಲ್ ಮತ್ತು ಲಿಂಬೆ ಚಮಚ ಓಟ, ಮಹಿಳೆಯರು ಹಾಗೂ ಪುರುಷರಿಗೆ ಏಳು ಜನರ ತಂಡದ ಹಗ್ಗಜಗ್ಗಾಟ, ಸಾರ್ವಜನಿಕರಿಗೆ ವಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ.

ಹಗ್ಗಜಗ್ಗಾಟ ಮತ್ತು ವಾಲಿಬಾಲ್‌ನಲ್ಲಿ ಭಾಗವಹಿಸುವ ತಂಡಗಳು ಸೆಪ್ಟೆಂಬರ್ 25ರೊಳಗೆ 9061272241, 7907407949 ಸಂಖ್ಯೆಗೆ ನೋಂದಾಯಿಸಿಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ. ತೀರ್ಪುಗಾರರು ಹಾಗೂ ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಪ್ರತಿಭಾನ್ವಿರಾದ ಸಾಕ್ಷಿ ಕಿದೂರು, ಧನ್‌ರಾಜ್ ಕಿದೂರು, ಅಪೇಕ್ಷ ಕಿದೂರು ಹಾಗೂ ವಂದಿತ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು

ಕಿದೂರು ಗುತ್ತು (ಬೊಲ್ಯ) ಉದ್ಯಮಿ ಮುಂಬೈ ಹಾಗೂ ಕಿದೂರು ಶ್ರೀ ಮಹಾದೇವ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿವೇಕ್ ಶೆಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜರಾಜೇಶ್ವರೀ ಕ್ಷೇತ್ರ ಮುಂಡಪಳ್ಳದ ಆಡಳಿತ ಮೊಕ್ತಸರ ಕೆ.ಕೆ. ಶೆಟ್ಟಿ ಕುತ್ತಿಕ್ಕಾರು ಹಾಗೂ ಹುಡ್ಕೊ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್. ಆಳ್ವ ಕಿದೂರು ಗುತ್ತು ಗೌರವ ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್, ಕರ್ನಾಟಕ ಕಾಂಗ್ರೆಸ್ ಪ್ರಾದೇಶಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement