ಮೀಯಪದವು : ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗುವೇದಪಡ್ಪುನಲ್ಲಿ ವಾಚನಾ ವಾರಾಚರಣೆ ಹಾಗೂ ಗ್ರಂಥಾಲಯ ದಿನಾಚರಣೆಯು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಗ್ರಂಥಾಲಯದ ಅಧ್ಯಕ್ಷರಾದ ಜಯರಾಮ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರತೀಶ್ ಕಾನ, ಅಶೋಕ್ ಕೊಡ್ಲಮೊಗರು, ಪ್ರದೀಪ್ ಗುವೇದಪಡ್ಪು,ಅಂಕಿತಾ, ಮಾದವ, ಮೋಕ್ಷಿತ್, ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ದ್ವಜಾರೋಹಣ, ಪುಸ್ತಕ ಪ್ರದರ್ಶನ, ಪುಸ್ತಕ ವಿಮರ್ಶೆ, ಪುಸ್ತಕ ಬಿಕ್ಷಾ ಅಭಿಯಾನ, ಅಕ್ಷರ ದೀಪ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

0 Comments