ಉಪ್ಪಳ : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನವು ಅಕ್ಟೋಬರ್ 10 ರಂದು ಸರಕಾರಿ ಪ್ರೌಢ ಶಾಲೆ ಕಡಂಬಾರ್ ನಲ್ಲಿ ಜರಗಲಿದೆ. ಇದರ ಪೂರ್ವಭಾವಿಯಾಗಿ ಮಂಜೇಶ್ವರ ಉಪಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯು ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಅಶೋಕ್ ಕೊಡ್ಲಮೊಗರು ರವರ ಅಧ್ಯಕ್ಷತೆಯಲ್ಲಿ ಉಪ್ಪಳದ ಕೈಕಂಬ ಪಂಚಮಿ ಸಭಾಂಗಣದಲ್ಲಿ ಜರಗಿತು.
ಸಭೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುಕೇಶ್, ಉಪಾಧ್ಯಕ್ಷರಾದ ಉಮೇಶ್ ಬಾಯಾರ್, ಕಾರ್ಯದರ್ಶಿಯಾದ ಜಯಪ್ರಶಾಂತ್ ಪಾಲೆಂಗ್ರಿ, ಸದಸ್ಯರಾದ ಶ್ರೀರಾಮ್ ಕೆದುಕೋಡಿ, ಚಂದ್ರಿಕಾ ಬಾಕ್ರಬೈಲ್, ಮಂಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಇಸ್ಮಾಯಿಲ್, ಉಪಜಿಲ್ಲಾ ಜತೆ ಕಾರ್ಯದರ್ಶಿಗಳಾದ ಅಶ್ರಫ್ ಮರ್ತ್ಯ, ಜಯಪ್ರಸಾದ್ ಪೆರ್ಮುದೆ, ಕಡಂಬಾರ್ ಶಾಲೆಯ ಮುಖ್ಯೋಪಾಧ್ಯಾಯರಾದ ಹರೀಶ್ ಕುಮಾರ್ ಕಡಂಬಾರ್, ಕಾರ್ಯಕಾರಿ ಸಮಿತಿ ಸದಸ್ಯರಾ ನಿಶಿತ್ ಐಲ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮೇಳನದ ಅಂಗವಾಗಿ ದಸರಾ ನಾಡ ಹಬ್ಬ ಪ್ರಯುಕ್ತ ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯ ಶಾಲೆಗಳ ಅಧ್ಯಾಪಕರಿಗಾಗಿ ಸಮೂಹ ಗೀತೆ ಮತ್ತು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಹಮ್ಮಿಕೊಳ್ಳಲಾಗಿದೆ. ಉಪಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಮುಂಡಿತ್ತಡ್ಕ ಸ್ವಾಗತಿಸಿ, ಕೋಶಾಧಿಕಾರಿ ಕಿಶೋರ್ ಕುಮಾರ್ ವಂದಿಸಿದರು.

0 Comments