Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕ.ಸಾ.ಪ ದಿಂದ ಮೀಯಪದವಿನಲ್ಲಿ ಎಸ್ .ವಿ ಭಟ್ ಸಂಸ್ಮರಣೆ ಮತ್ತು ಕವಿಗೋಷ್ಠಿ

ಮೀಯಪದವು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಿವೃತ್ತ ಶಿಕ್ಷಣಾ ಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಮತ್ತು ಕವಿಗೋಷ್ಠಿಯು ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯ 'ಕೇಶವಾಮೃತಂ' ಸಭಾಂಗಣದಲ್ಲಿ ನಡೆಯಿತು. 

ವಿದ್ಯಾವರ್ಧಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್.  ಟಿ  ಸಂಸ್ಮರಣಾ ಭಾಷಣ ಮಾಡಿದರು. ದಿ. ಎಸ್ .ವಿ ಭಟ್ಟರು ಕ.ಸಾ.ಪ ಅಧ್ಯಕ್ಷರಾಗಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅಪಾರ ಶ್ರಮ ವಹಿಸಿದ್ದರು. ಸದಾ ಕ್ರಿಯಾಶೀಲರಾಗಿದ್ದ ಅವರು ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಹಲವು ಕನ್ನಡಪರ ಚಟುವಟಿಕೆಗಳನ್ನು ನಡೆಸಿ ಗಡಿನಾಡು ಕಾಸರಗೋಡಿನಲ್ಲಿ ವಿಶೇಷ ಛಾಪನ್ನು ಮೂಡಿಸಿದ್ದರು. ಮೃದು ಮಾತಿನ, ದೃಢ ನಿರ್ಧಾರದ ಅವರ ವ್ಯಕ್ತಿತ್ವ ಅನುಸರಣೀಯವಾದುದು ಎಂದು ರಾಜಾರಾಮ ರಾವ್ ಹೇಳಿದರು. ಎಸ್ .ವಿ ಭಟ್ ಅವರ ನೆನಪು, ಆದರ್ಶ ದೊಂದಿಗೆ ಕಾಸರಗೋಡಿನಲ್ಲಿ ಕನ್ನಡದ ಧ್ವನಿಯನ್ನು ಎತ್ತರ ಕ್ಕೇರಿಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಅವರು ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ. ಪಿ. ಎನ್ ಮೂಡಿತ್ತಾಯ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಾರಾಯಣ ದೇಲಂಪಾಡಿ ಮುಖ್ಯ ಅತಿಥಿಗಳಾಗಿದ್ದರು. ಹೈಯರ್ ಸೆಕಂಡರಿ ಪ್ರಾಂಶುಪಾಲ ರಮೇಶ್  ಕೆ.ಎನ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮೃದುಲ.ಕೆ, ಗಮಕ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕರೆ ಶಂಕರನಾರಾಯಣ ಭಟ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ  ಸಂಘದ ಅಧ್ಯಕ್ಷ ಸುಕೇಶ.ಎ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ ಬಜಕೂಡ್ಲು, ಪೊಸಡಿಗುಂಪೆ ಪತ್ರಿಕೆಯ ಸಂಪಾದಕ ಜೋನ್.ಡಿ ಕಯ್ಯಾರ, ಶ್ರೀಕಾಂತ ರಾವ್, ಸದಾಶಿವ ಭಟ್.ಟಿ, ಡಾ. ವಿಘ್ನೇಶ ಶರ್ಮ, ಅರವಿಂದಾಕ್ಷ ಭಂಡಾರಿ, ಅಹಮ್ಮದ್ ಹುಸೇನ್ ಪಿ.ಕೆ  ಉಪಸ್ಥಿತರಿದ್ದರು. ಅನುಷಾ. ಪಿ ಮತ್ತು ಸಾನಿಧ್ಯ ಭಟ್ ಪ್ರಾರ್ಥನೆ ಹಾಡಿದರು. ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ,  ಶಿಕ್ಷಕಿ ಸಾವಿತ್ರಿ.ಎಂ, ಪ್ರಾಧ್ಯಾಪಕ ಹರೀಶ.ಜಿ ಕಾರ್ಯಕ್ರಮ ನಿರೂಪಿಸಿದರು. ಹೈಯರ್ ಸೆಕೆಂಡರಿ ಪ್ರಾಧ್ಯಾಪಕ ರವಿಲೋಚನ ಸಿ. ಎಚ್ ಧನ್ಯವಾದ ಸಮರ್ಪಿಸಿದರು.

 ಬಳಿಕ ನಡೆದ ಕವಿಗೋಷ್ಠಿಯಲ್ಲಿ ಸಾವಿತ್ರಿ. ಎಂ, ಅರುಣ ಕೆ.ಸಿ, ಲೋಕೇಶ್ .ಕೆ ,ಹರೀಶ .ಜಿ, ಸುಧಾ ಕೆ.ಎಂ, ಲವಾನಂದ ಎಲಿಯಾಣ, ರಾಜಾರಾಮ.ಪಿ, ಸಾನಿಧ್ಯ .ಇ, ವರ್ಷಿಕ ಶೆಟ್ಟಿ, ಸಾನ್ವಿ , ಗೃತಿಕಾ, ಫಾತಿಮಾತ್ ಮನ್ಸೂರ, ಶಾರ್ವಿ. ಆರ್ , ಚಿಂತನ.ಕೆ , ಅದಿಶ, ಹರಿಸ್ಮಿತಾ.ಎನ್, ಸಾನಿಧ್ಯ ಭಟ್, ಆದಿರ ಪಿ.ಎಲ್ ಅನುಷಾ. ಪಿ ಕವನ ವಾಚನ ಮಾಡಿದರು.

Post a Comment

0 Comments

ಜಾಹೀರಾತು

Responsive Advertisement