Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅಂಗನವಾಡಿಯ ಅಮೃತಂ ಪುಡಿಯಲ್ಲಿ ಸಕ್ಕರೆ ನಿಷೇಧ : ಬೆಲ್ಲ ಬಳಕೆಗೆ ಸೂಚನೆ

ತಿರುವನಂತಪುರಂ: ಅಂಗನವಾಡಿಗಳ ಮೂಲಕ ವಿತರಿಸಲಾಗುವ ‘ಅಮೃತಂ ಪುಡಿ’ಯಲ್ಲಿ ಇನ್ನು ಮುಂದೆ ಸಕ್ಕರೆ ಬಳಸುವುದಿಲ್ಲ. ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸುವಂತೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಮೃತಂ ಪುಡಿಯಲ್ಲಿ ಸಕ್ಕರೆ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ನೀಡಿದ ಆದೇಶದ ಹಿನ್ನೆಲೆಯಲ್ಲಿ ಈ ತುರ್ತು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ತಯಾರಿಸಲಾಗುತ್ತಿರುವ ಬ್ಯಾಚ್ ಪೂರ್ಣಗೊಂಡ ಬಳಿಕ, ಮುಂದಿನ ಬ್ಯಾಚ್‌ನಿಂದ ಸಿಹಿಗಾಗಿ ಕಡಿಮೆ ಪ್ರಮಾಣದಲ್ಲಿ ಬೆಲ್ಲವನ್ನು ಮಾತ್ರ ಬಳಸಲಾಗುವುದು ಎಂದು ಇಲಾಖೆ ತಿಳಿಸಿದೆ.

Post a Comment

0 Comments

ಜಾಹೀರಾತು

Responsive Advertisement