ಕಣ್ಣೂರು: ರೈಲು ಪ್ರಯಾಣಿಕರ ಮೊಬೈಲ್, ಪವರ್‌ಬ್ಯಾಂಕ್, ಆಧಾರ್ ಕಾರ್ಡ್ ಹಾಗೂ ಹಣವಿದ್ದ ಬ್ಯಾಗ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಕಣ್ಣೂರು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಡಕರ ಮೇಪ್ಪಯಿಲ್ ಕಲ್ಲುನಿರಪ್ಪರಂಬತ್ ಪ್ರವೀಣ್ (31) ಎಂದು ಗುರುತಿಸಲಾಗಿದೆ. ಹರಿದ್ವಾರದಿಂದ ಎರ್ನಾಕುಳಂಗೆ ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಡುಕ್ಕಿ ಆಲಕ್ಕೋಡ್ ನಿವಾಸಿ ಅಲ್ಫೋನ್ಸಾ ರೆನಿ ಅವರ ಬ್ಯಾಗ್ ಕಣ್ಣೂರು ತಲುಪುವ ವೇಳೆ ಕಳವಾಗಿತ್ತು. ಬ್ಯಾಗ್‌ನಲ್ಲಿ ₹30 ಸಾವಿರ ಮೌಲ್ಯದ ಮೊಬೈಲ್, ₹1,500 ಮೌಲ್ಯದ ಪವರ್‌ಬ್ಯಾಂಕ್ ಹಾಗೂ ₹3 ಸಾವಿರ ನಗದು ಸೇರಿದಂತೆ ವಸ್ತುಗಳಿದ್ದವು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿದೆ. ಕಣ್ಣೂರು ರೈಲ್ವೇ ಪೊಲೀಸ್ ಸಿಐ ಸಂತೋಷ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಾನ್‌ಸಾಫ್ ಹಾಗೂ ಗುಪ್ತಚರ ವಿಭಾಗದ ಸಿಬ್ಬಂದಿ ಪಾಲ್ಗೊಂಡಿದ್ದರು.
.jpeg)
0 Comments