ಉಪ್ಪಳ : ಅಟ್ಟೆಗೋಳಿಯ ದಿ.ಸುಬ್ಬ ಎಂಬವರ ಪುತ್ರ ಬಾಲಕೃಷ್ಣ(55) ಕಳೆದ ಸೋಮವಾರದಿಂದ ನಾಪತ್ತೆಯಾಗಿದ್ದು ತೀವ್ರ ಹುಡುಕಾಟದ ನಡುವೆ ಇದೀಗ ಪೂರ್ವಾಹ್ನ ಇವರು ಉಪ್ಪಳ ಬಸ್ಟೆಂಡಿನಲ್ಲಿ ಪತ್ತೆಯಾಗಿದ್ದಾರೆ. ಕೂಲಿ ಕಾರ್ಮಿಕರಾದ ಇವರು ಚೌತಿಯ ದಿವಸ ಜೋಡುಕಲ್ಲಿನಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ತಿಳಿಸಿ ತೆರಳಿದವರು ಮನೆಗೆ ಮರಳಿ ಬರಲಿಲ್ಲ ಎಂದು ಇವರ ಸಹೋದರ ಜಯರಾಮ ತಿಳಿಸಿದ್ದರು. ಇವರಿಗಾಗಿ ಪ್ರಕಟಣೆಯೊಂದಿಗೆ ಹುಡುಕಾಟದ ನಡುವೆ ಬೆಳಿಗ್ಗೆ ಉಪ್ಪಳ ಬಸ್ ನಿಲ್ದಾಣದಲ್ಲಿ ಅಡ್ಡಾಡುತ್ತಿರುವುದನ್ನು ಲಾಟರಿ ಮಾರಾಟಗಾರರೋರ್ವರು ಪತ್ತೆ ಹಚ್ಚಿದ್ದು ಸುರಕ್ಷಿತವಾಗಿ ಮನೆಗೆ ತಲುಪಿಸಲಾಗಿದೆ. ಹುಡುಕಾಟಕ್ಕೆ ಸಹಕರಿಸಿದವರಿಗೆ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ.

0 Comments