Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಕ್ಕಳಿಗೆ ಕೃಷಿ, ಪೌಷ್ಟಿಕ ಆಹಾರದ ಅರಿವು ಮೂಡಿಸಲು ಅಂಗಡಿಮೊಗರು ಶಾಲೆಯ ಪೌಷ್ಟಿಕ ತೋಟದಲ್ಲಿ ಬೆಂಡೆಕಾಯಿ ಕೊಯ್ಲು

ಅಂಗಡಿಮೊಗರು : ಜಿ.ಎಚ್.ಎಸ್.ಎಸ್. ಅಂಗಡಿಮೊಗರು ಶಾಲೆಯ ಪೌಷ್ಟಿಕ ತೋಟದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಬೆಳೆಸಿದ ಬೆಂಡೆಕಾಯಿ ಬೆಳೆಯ ಮೊದಲ ಕೊಯ್ಲು ಮಂಗಳವಾರ ಸಂಭ್ರಮದಿಂದ ನಡೆಯಿತು.

ಪುತ್ತಿಗೆ ಗ್ರಾ.ಪಂ.ಸದಸ್ಯ ಶಿವಪ್ಪ ರೈ ಅವರು ಬೆಂಡೆಕಾಯಿ ಕೊಯ್ದು ಕೊಯ್ಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಆವರಣದಲ್ಲಿ ಬೆಳೆಸಿದ ಬೆಂಡೆಕಾಯಿ ಉತ್ತಮವಾಗಿ ಬೆಳೆದಿದ್ದು, ಮೊದಲ ಕೊಯ್ಲು ವಿದ್ಯಾರ್ಥಿಗಳಲ್ಲಿ ವಿಶೇಷ ಉತ್ಸಾಹ ಮೂಡಿಸಿತು. ಕಾರ್ಯಕ್ರಮದಲ್ಲಿ ಶಾಲಾ ತಾಯಂದಿರ–ಶಿಕ್ಷಕರ(MPTA) ಸಂಘದ ಅಧ್ಯಕ್ಷೆ ಅರುದಂತಿ, ಶಾಲಾ ನಿರ್ವಹಣಾ ಸಮಿತಿ ಅಧ್ಯಕ್ಷ ರಜಾಕ್ ತೋಣಿ, ಸದಸ್ಯ ಆನಂದ ಎಂ.ಕೆ., ಮುಖ್ಯೋಪಾಧ್ಯಾಯಿನಿ ಭಾನು ಎ.ಸಿ., ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊಯ್ಲು ಮಾಡಿದ ಬೆಂಡೆಕಾಯಿಗಳನ್ನು ಶಾಲೆಯ ಅಡುಗೆಮನೆಗೆ ನೀಡಲಾಯಿತು. ಪೌಷ್ಟಿಕ ತೋಟದಲ್ಲಿ ಬೆಳೆದ ತರಕಾರಿಗಳನ್ನು ಮಕ್ಕಳ ಮಧ್ಯಾಹ್ನದ ಊಟಕ್ಕೆ ಬಳಸುವ ಮೂಲಕ ‘ತೋಟದಿಂದ ಅಡುಗೆಮನೆಗೆ’ ಎಂಬ ಆಶಯವನ್ನು ಸಾಕಾರಗೊಳಿಸಲಾಗುತ್ತಿದೆ.

ಕೇವಲ ತರಕಾರಿ ಬೆಳೆಯುವುದಷ್ಟೇ ಅಲ್ಲದೆ, ಆರೋಗ್ಯಕರ ಆಹಾರ ಪದ್ಧತಿ, ಕೃಷಿಯ ಬಗ್ಗೆ ಆಸಕ್ತಿ ಹಾಗೂ ಪರಿಸರ ಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಶಾಲೆಯಲ್ಲಿ ಪೌಷ್ಟಿಕ ತೋಟವನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕೃಷಿಯ ಕುರಿತು ಪ್ರಾಯೋಗಿಕ ಅನುಭವದ ಜೊತೆಗೆ ಪೌಷ್ಟಿಕ ಆಹಾರದ ಮಹತ್ವದ ಅರಿವೂ ಮೂಡಿಸಲಾಗುತ್ತದೆ.

Post a Comment

0 Comments

ಜಾಹೀರಾತು

Responsive Advertisement