Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸಹಕಾರ ಇಲಾಖೆಯ ‘ಆಶ್ವಾಸ್ 2026’ ಜಿಲ್ಲಾ ಅದಾಲತ್‌ಗೆ ಕಾಞಂಗಾಡ್‌ನಲ್ಲಿ ಚಾಲನೆ

ಕಾಞಂಗಾಡ್ : ಸಹಕಾರ ಇಲಾಖೆಯ ಬಾಕಿ ಸಾಲಗಳ ಒನ್‌ಟೈಮ್ ಸೆಟಲ್‌ಮೆಂಟ್ ಯೋಜನೆಯಾದ ‘ಆಶ್ವಾಸ್ 2026’ರ ಜಿಲ್ಲಾ ಅದಾಲತ್ ಕಾಞಂಗಾಡ್ ಟೌನ್ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಶಾಸಕ ನೀಲಕಂಠನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾಸರಗೋಡು ಜಂಟಿ ರಿಜಿಸ್ಟ್ರಾರ್ (ಜನರಲ್) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕಲ್ಲಟ್ರ ಮಾಹಿನ್, ಸಂದೀಪ್ ವಾರಿಯರ್ ಹಾಗೂ ಎ.ಕೆ.ಎಂ. ಅಶ್ರಫ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾಸರಗೋಡು ಜಂಟಿ ನಿರ್ದೇಶಕ ಟಿ.ಎಂ. ಮ್ಯಾಥ್ಯೂ, ಡೆಪ್ಯುಟಿ ರಿಜಿಸ್ಟ್ರಾರ್ ಕಣ್ಣನ್ ಎಸ್., ಮಂಜೇಶ್ವರ ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಜೆ.ಎಸ್., ತೃಕ್ಕರಿಪ್ಪೂರು ಫಾರ್ಮರ್ಸ್ ಸರ್ವಿಸ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಿ. ರವಿ, ಕರಿಂತಳಂ ಸರ್ವಿಸ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ಲಕ್ಷ್ಮಣನ್, ಮುಳಿಯಾರ್ ಸರ್ವಿಸ್ ಬ್ಯಾಂಕ್ ಅಧ್ಯಕ್ಷ ಟಿ. ಗೋಪಿನಾಥನ್ ನಾಯರ್ ಹಾಗೂ ಕೋಟಪ್ಪಾರ ಫಾರ್ಮರ್ಸ್ ಸಹಕಾರಿ ಬ್ಯಾಂಕ್ ಪ್ರತಿನಿಧಿ ಶಂಕರನ್ ವಾಜಕ್ಕೋಡನ್ ಉಪಸ್ಥಿತರಿದ್ದರು.

ಹೊಸದುರ್ಗ ಸಹಾಯಕ ರಿಜಿಸ್ಟ್ರಾರ್ ಬಿಂದುಮೋಳ್ ಎನ್.ಆರ್., ಕಾಸರಗೋಡು ಸಹಾಯಕ ರಿಜಿಸ್ಟ್ರಾರ್ ಸಿ. ವಿನೋದ್ ಕುಮಾರ್, ಮಂಜೇಶ್ವರ ಸಹಾಯಕ ರಿಜಿಸ್ಟ್ರಾರ್ ಜೆ. ಅಶೋಕನ್ ಹಾಗೂ ವೆಳ್ಳರಿಕುಂಡ್ ಸಹಾಯಕ ರಿಜಿಸ್ಟ್ರಾರ್ ವಿ.ವಿ. ಶ್ರೀವಿದ್ಯಾ ಮಾತನಾಡಿದರು. ಕಾಸರಗೋಡು ಸಹಾಯಕ ರಿಜಿಸ್ಟ್ರಾರ್ (ಪ್ಲಾನಿಂಗ್) ಸಿ. ಸುನಿಲ್ ಕುಮಾರ್ ಸ್ವಾಗತಿಸಿ, ಕಾಸರಗೋಡು ಸಹಾಯಕ ರಿಜಿಸ್ಟ್ರಾರ್ ಜೆ. ರಾಜೀವನ್ ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement