Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪೆರ್ಲ ಬಿಲ್ಲವ ಸಂಘ ಹಾಗೂ ಮಹಿಳಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ


 ಪೆರ್ಲ : ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ (ರಿ ) ಪೆರ್ಲ ಇದರ ಮಹಾಸಭೆಯು ಪೆರ್ಲ ವ್ಯಾಪಾರ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಿ. ಪಿ. ಶೇಣಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕಾರ್ಯದರ್ಶಿ ಅಖಿಲೇಶ್ ಕಾನ ಪ್ರಾಸ್ತಾವಿಕವಾಗಿ ಮಾತನಾಡಿ ಬಳಿಕ ಗತ ವರ್ಷದ ವರದಿ ಸಲ್ಲಿಸಿದರು. ಖಜಾಂಜಿ ಪದ್ಮನಾಭ ಸುವರ್ಣ ಬಜಕೂಡ್ಲು ಆಯ- ವ್ಯಯ ಮಂಡಿಸಿದರು. ಈ ಸಂದರ್ಭದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಮಾಧಿ ದಿನವನ್ನು ಆಚರಿಸಲಾಯಿತು. ಉದ್ಯಮಿ ದಿನೇಶ್ ಅಮೆಕ್ಕಳ ದೀಪ ಬೆಳಗಿಸಿದರು. ಉಮೇಶ ಮಾಸ್ಟರ್ ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಗ್ಗೆ ಮಾತನಾಡಿದರು. ಬ್ರಹ್ಮ ಶ್ರೀ ನಾರಾಯಣ ಗುರು ಮಹಿಳಾ ಸಮಿತಿ ಅಧ್ಯಕ್ಷೆ ರುಕ್ಮಿಣಿ ಸುವರ್ಣ ಮಹಿಳಾ ಸಂಘ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.  ಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಬಿಲ್ಲವ ಸೇವಾ ಸಂಘಕ್ಕೆ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಆಯ್ಕೆ ಮಾಡಲಾಯಿತು. ಬಿ ಪಿ ಶೇಣಿ (ಅಧ್ಯಕ್ಷರು ), ಪುರುಷೋತ್ತಮ ಪೆರ್ಲ, ಹರಿಣಾಕ್ಷಿ ಮಣಿಯಂಪಾರೆ, ಡಾ. ಕೃಷ್ಣ ಮೋಹನ ಬಜಕೂಡ್ಲು, ರಮೇಶ್ ನಡುಬೈಲು (ಉಪಾಧ್ಯಕ್ಷರು ), ಅಖಿಲೇಶ್ ಕಾನ (ಪ್ರಧಾನ ಕಾರ್ಯದರ್ಶಿ ), ರಾಮಣ್ಣ ಪೂಜಾರಿ ಬಾಂಕಾನ, ರಾಜಪ್ಪ ಕಾಟುಕುಕ್ಕೆ, ಸುಶ್ಮಿತಾ ಕಾನ (ಕಾರ್ಯದರ್ಶಿಗಳು), ಪದ್ಮನಾಭ ಸುವರ್ಣ ಬಜಕೂಡ್ಲು (ಖಜಾಂಜಿ ) ಅಲ್ಲದೆ ಲೋಹಿತ್ ಮುಂಡಿತಡ್ಕ, ದಿನೇಶ ಸಂಟನಡ್ಕ, ಐತಪ್ಪ ಪೂಜಾರಿ ಬಳ್ತಕಲ್ಲು, ವಿನೀತ್ ಕಾನ, ಸುರೇಶ ಕಾನ, ಪುನೀತ್ ಅಮೆಕ್ಕಳ, ಹೇಮಂತ್ ಬೀರಿಕುಂಜ, ಲಲಿತಾ ಅರೆಮಂಗಿಲ, ನರಸಿಂಹ ಪೂಜಾರಿ ವಾಣಿನಗರ, ನಾರಾಯಣ ಪೂಜಾರಿ ಶೇಣಿ, ಪ್ರವೀಣ ಅರೆಮಂಗಿಲ, ಕೃಷ್ಣಪ್ಪ ಮಾಸ್ಟರ್ ನಡುಬೈಲು, ಹರೀಶ ಸೇರಾಜೆ, ಮೋಹನ ಬೆದ್ರoಪಳ್ಳ, ಹರ್ಷ ಬಿರ್ಮೂಲೆ, ಗಂಗಾಧರ ಕಾಟುಕುಕ್ಕೆ, ಸತೀಶ್ ಕೊಲ್ಯ, ವಿನಯ ಬೆದ್ರoಪಳ್ಳ, ಎಂ ಕೆ ಆನಂದ ಮಂಟಪಾಡಿ, ಸಂಕಪ್ಪ ಪೂಜಾರಿ ಬಾಡೂರು (ಕಾರ್ಯಕಾರೀ ಸಮಿತಿ ಸದಸ್ಯರು).

 ಸದಾನಂದ ಭೈರಡ್ಕ, ದಿನೇಶ್ ಅಮೆಕ್ಕಳ, ಕೃಷ್ಣಪ್ಪ ಪೂಜಾರಿ ಬಜಕೂಡ್ಲು (ಗೌರವಾಧ್ಯಕ್ಷರು), ಸುನೀತ್ ಕುಮಾರ್ ಡಿ, ಚನಿಯಪ್ಪ ಪೂಜಾರಿ ಅಳಾರು, ಶಿವಪ್ಪ ಮಾಸ್ಟರ್ ಯೆಣ್ಮಕಜೆ, ನಾರಾಯಣ ಮಾಸ್ಟರ್ ಕುದ್ವ (ಖಾಯಂ ಆಹ್ವಾನಿತರು). 

  ಬಿಲ್ಲವ ಮಹಿಳಾ ಸಮಿತಿಗೆ ಪದಾಧಿಕಾರಿಗಳಾಗಿ ರುಕ್ಮಿಣಿ ಸುವರ್ಣ (ಅಧ್ಯಕ್ಷೆ), ಯಶೋದಾ ಕಾನ, ಚಂಪಾವತಿ ಬಜಕೂಡ್ಲು, ಅರುಣಾಕ್ಷಿ ಬನ್ಪುತಡ್ಕ, ಅಮಿತಾ ಟೀಚರ್(ಉಪಾಧ್ಯಕ್ಷರು), ರಾಜೇಶ್ವರಿ ಕಾನ (ಪ್ರಧಾನ ಕಾರ್ಯದರ್ಶಿ),, ಸಹನಾ ರಘುರಾಮ್, ಮಮತಾ ನಡುಬೈಲು, ಉಮಾಲತಾ ಮುಂಡಿತಡ್ಕ(ಕಾರ್ಯದರ್ಶಿಗಳು), ಸುನೀತಾ, ಹರಿಣಾಕ್ಷಿ ಟೀಚರ್, ಕುಸುಮ ನಡುಬೈಲು, ವಿದ್ಯಾಕುಮಾರಿ ಬಜಕೂಡ್ಲು, ಶಾರದಾ ಸಂಟನಡ್ಕ, (ಕಾರ್ಯಕಾರೀ ಸಮಿತಿ ಸದಸ್ಯರು). ಇವರನ್ನು ಆಯ್ಕೆ ಮಾಡಲಾಯಿತು.

  ಸಂಘಕ್ಕೆ ಜಾಗ ಖರೀದಿಸಿ, ನೂತನ ಕಟ್ಟಡ ನಿರ್ಮಿಸಲು ಪ್ರತ್ಯೇಕ ಸಮಿತಿ ರೂಪೀಕರಿಸಲಾಯಿತು. ಶ್ರೀಕೃಷ್ಣ ಗುರೂಜಿ ಕುಕ್ಕಾಜೆ, ಶಿವಾನಂದ ಬಜಕೂಡ್ಲು,ಸದಾನಂದ ಪೆರ್ಲ, ಸೀನಪ್ಪ ಪೂಜಾರಿ ಅಳಾರು,ಸುನೀತ್ ಮಾಸ್ಟರ್ ಕಾಟುಕುಕ್ಕೆ, ಅಶೋಕ್ ಮಾಸ್ಟರ್ ಬಾಡೂರು,ಕೃಷ್ಣಪ್ಪ ಪೂಜಾರಿ ಬಜಕೂಡ್ಲು, ಡಾ. ಕೃಷ್ಣ ಮೋಹನ್ ಬಜಕೂಡ್ಲು, ದಿನೇಶ ಅಮೆಕ್ಕಳ, ಸದಾನಂದ ಭೈರಡ್ಕ, ಮಹಾಬಲ ಪೂಜಾರಿ ಕಾಟುಕುಕ್ಕೆ, ರಾಮ್ ಕುಮಾರ್ ಮುಂಡಿತಡ್ಕ, ಪೂವಪ್ಪ ಪೂಜಾರಿ ಮುಂಡಿತಡ್ಕ, ಬಿ. ಪಿ. ಶೇಣಿ, ಉಮೇಶ ಮಾಸ್ಟರ್ ಅಮೆಕ್ಕಳ, ಹರೀಶ ಸೇರಾಜೆ, ಆನಂದ ಮಂಟಪಾಡಿ, ಪದ್ಮನಾಭ ಸುವರ್ಣ ಬಜಕೂಡ್ಲು, ರಾಮಣ್ಣ ಪೂಜಾರಿ ಬಾಂಕಾನ, ಅಖಿಲೇಶ್ ಕಾನ, ಸುಬ್ಬಣ್ಣ ಪೂಜಾರಿ ಬಳ್ತಕಲ್ಲು, ಚನಿಯಪ್ಪ ಪೂಜಾರಿ ಅಳಾರು,ಚನಿಯಪ್ಪ ಪೂಜಾರಿ ಮಣಿಯoಪಾರೆ,ಸಂಕಪ್ಪ ಸುವರ್ಣ ಬಾಡೂರು, ಪುರುಷೋತ್ತಮ ಪೆರ್ಲ, ಎಂ. ಆರ್. ಮಣಿ, ಸುಧಾಕರ ಮಾಸ್ಟರ್, ಕೃಷ್ಣಪ್ಪ ಮಾಸ್ಟರ್ ನಡುಬೈಲು, ನರಸಿಂಹ ಪೂಜಾರಿ ವಾಣಿನಗರ, ನಾರಾಯಣ ಮಾಸ್ಟರ್ ಕುದ್ವ ಸಮಿತಿ ಸದಸ್ಯರಾಗಿ, ಈ ಪೈಕಿ ಡಾ. ಕೃಷ್ಣಮೋಹನ ಬಜಕೂಡ್ಲು ಇವರನ್ನು ಸಮಿತಿ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.ಮಹಾಸಭೆಗೆ ರಾಜೇಶ್ವರಿ ಕಾನ ಸ್ವಾಗತಿಸಿ, ಉಮಾಲತಾ ಮುಗು ಧನ್ಯವಾದವಿತ್ತರು. ಕು. ಪ್ರತೀಕ್ಷಾ ಪ್ರಾರ್ಥನೆ ಹಾಡಿದರು. ಉಮೇಶ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.


Post a Comment

0 Comments

ಜಾಹೀರಾತು

Responsive Advertisement