ಕುಂಬಳೆ: ಸ್ಕೂಟರ್ ನಿಯಂತ್ರಣ ತಪ್ಪಿ ಸುರಕ್ಷಾ ಗೋಡೆಗೆ ಡಿಕ್ಕಿ ಹೊಡೆದು ಮಗುಚಿದ ಪರಿಣಾಮ ಸವಾರ ಗಾಯಗೊಂಡ ಘಟನೆ ಬಂದ್ಯೋಡು ಸಮೀಪದ ಶಿರಿಯದಲ್ಲಿ ನಡೆದಿದೆ.
ಮಂಗಳೂರು ಕಟೀಲಿನ ನಿವಾಸಿ ಜೋಸೆಫ್ ಡಿ. ಸೋಜ (52) ಗಾಯಗೊಂಡವರು. ಬೇಳದಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಶಿರಿಯದಲ್ಲಿ ಅಪಘಾತ ಸಂಭವಿಸಿದೆ.ಗಾಯಗೊಂಡ ಜೋಸೆಫ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

0 Comments