Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪಾವೂರು ಪೊಯ್ಯೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯಿಂದ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ


ಪಾವೂರು :ಪೊಯ್ಯೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಬಜಾಲ್, ಪಾವೂರು ಇದರ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನಡೆಯಿತು.  ಬೆಳಿಗ್ಗೆ. ಪೊಯ್ಯೇ ಚಾಮುಂಡೇಶ್ವರಿ ಕ್ಷೇತ್ರ ಆಡಳಿತ ಮಂಡಳಿಯ  ಅಧ್ಯಕ್ಷ ವಿನೋದ್ ಕುಮಾರ್ ಉದ್ಘಾಟಿಸುವುದರ ಮೂಲಕ ವಿವಿಧ ಆಟೋಟ ಸ್ಪರ್ಧೆ ಹಾಗೂ ಪುಟಾಣಿ ಕೃಷ್ಣವೇಶ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ವಿಶ್ವನಾಥ ಕಲ್ಲಾಜೆ ಅವರು ಸಭಾಧ್ಯಕ್ಷೆ ವಹಿಸಿದ್ದರು. ಈ ಸಂದರ್ಭದಲ್ಲಿ ಕನಿಲ ಭಗವತಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಗಣೇಶ್ ಪಾವೂರು ಕೃಷ್ಣನ ಬಾಲ್ಯದ ತುಂಟಾಟದ ಬಗ್ಗೆ ಅಲ್ಲದೆ ಕೃಷ್ಣನ ಅವತಾರ ಯಾಕಾಗಿ ಸಂಭವಿಸಿತು ಎಂಬ ವಿಚಾರವಾಗಿ ಮಾತನಾಡಿದರು .ಸಭೆಯಲ್ಲಿ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷರಾದ ವಿನೋದ್ ರೇಂಜಪಡುಪು, ಅಲ್ಲದೆ ಸಮಿತಿಯ ವಿಶ್ವಂಬರ ನಾಯ್ಕ್ ಮಳಿಗುತ್ತು, ತ್ಯಾಂಪಣ್ಣ ರೈ ಪಾವೂರು, ರವಿ ಮುಡಿಮಾರು, ಕನಿಲ ಭಗವತಿ ಕ್ಷೇತ್ರ ಸಮಿತಿಯ ಅಶೋಕ್ ಪಾವೂರು, ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠ ಅಭರಣ ಸಂಸ್ಥೆಯಾದ ಬಿಂದು ಜುವೆಲರ್ಸ್ ಕಾಸರಗೋಡು ಇವರು ನಡೆಸಿಕೊಟ್ಟ ಲಕ್ಕಿ ಕೂಪನ್ ಡ್ರಾದಲ್ಲಿ ಪ್ರಾಪ್ತಿ .ವಿ. ಶೆಟ್ಟಿಯವರಿಗೆ ಬಹುಮಾನ ವನ್ನು ನೀಡಲಾಯಿತು.  ನಿವೃತ್ತ ಮುಖ್ಯೋಪಾಧ್ಯಾಯ ಭೋಜಮಾಸ್ಟರ್ ನಿರೂಪಿಸಿದರು.,  ಹರ್ಷಿತ್ ನೆಕ್ಕಲ ಸ್ವಾಗತಿಸಿ ವಿಶ್ವನಾಥ ಶೆಟ್ಟಿ ಕೋರಿಮೊಗರು ವಂದಿಸಿದರು. ನಂತರ ಭಜನಾ ಮಂಡಳಿ ಹಾಗೂ ಮಹಿಳಾ ಸಮಿತಿ ಅವರಿಂದ ಭಜನಾ ಸಂಕೀರ್ತನೆಯು ನಡೆಯಿತು.

Post a Comment

0 Comments

ಜಾಹೀರಾತು

Responsive Advertisement