ಮಂಗಳೂರು : ಆಡಳಿತಾತ್ಮಕ ಜವಾಬ್ದಾರಿಗಳ ನಡುವೆಯೂ ದೈಹಿಕ ಕ್ಷಮತೆಗೆ ಆದ್ಯತೆ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಮುಂಬೈನಲ್ಲಿ ನಡೆದ ‘ಹೈರಾಕ್ಸ್ - 2026’ ಅಂತಾರಾಷ್ಟ್ರೀಯ ಫಿಟ್‌ನೆಸ್ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಸೆಪ್ಟೆಂಬರ್ 20ರಂದು ನಡೆದ ಮೆನ್ಸ್ ಡಬಲ್ಸ್ ವಿಭಾಗದಲ್ಲಿ ದರ್ಶನ್ ಹೆಚ್.ವಿ. ಹಾಗೂ ಮಂಗಳೂರಿನ ಕಶಾರ್ಪ್ ಫಿಟ್‌ನೆಸ್‌ನ ಜನರಲ್ ಮ್ಯಾನೇಜರ್ ಮತ್ತು ಅಂತಾರಾಷ್ಟ್ರೀಯ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಅವರ ಜೋಡಿ 1 ಗಂಟೆ 39 ನಿಮಿಷ 09 ಸೆಕೆಂಡ್‌ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿದೆ.
ಹೈರಾಕ್ಸ್ ಸ್ಪರ್ಧೆಯಲ್ಲಿ ಓಟದ ಜೊತೆಗೆ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಎಂಟು ಕಠಿಣ ಫಿಟ್‌ನೆಸ್ ಕಸರತ್ತುಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಬಿಡುವಿಲ್ಲದ ಆಡಳಿತಾತ್ಮಕ ಒತ್ತಡದ ನಡುವೆಯೂ ಜಿಲ್ಲಾಧಿಕಾರಿ ಈ ಸವಾಲಿನ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಗಮನ ಸೆಳೆದಿದೆ.
ಆರೋಗ್ಯ ಮತ್ತು ದೈಹಿಕ ಕ್ಷಮತೆ ಜೀವನಶೈಲಿಯ ಪ್ರಮುಖ ಭಾಗವಾಗಬೇಕು ಎಂಬ ಸಂದೇಶವನ್ನು ತಮ್ಮ ಸಾಧನೆಯ ಮೂಲಕ ಸಾರಿರುವ ದರ್ಶನ್ ಹೆಚ್.ವಿ. ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

0 Comments