Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಧರ್ಮಸ್ಥಳ ಭಜನಾ ಪರಿಷತ್ತಿನ 28ನೇ ವರ್ಷದ ಭಜನಾ ಕಮ್ಮಟಕ್ಕೆ ಭರದ ಸಿದ್ಧತೆ ; ಮುಳ್ಳೇರಿಯ ಕಾರಡ್ಕ ವಲಯ ಭಜನಾ ಪರಿಷತ್ ರಚನೆ

ಮುಳ್ಳೇರಿಯ : ಕಾಸರಗೋಡು ತಾಲೂಕಿನ ಮುಳ್ಳೇರಿಯ ಕಾರಡ್ಕ ವಲಯ ಭಜನಾ ಪರಿಷತ್ ರಚನೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ಇದರ ನೇತೃತ್ವದಲ್ಲಿ ನೂತನ ವಲಯ ಸಮಿತಿ ಗಣೇಶ ಕಲಾ ಭವನದ ಸಭಾಂಗಣದಲ್ಲಿ ನಡೆಯಿತು. ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ಕೆ.ಎನ್. ವೆಂಕಟರಮಣ ಹೊಳ್ಳ ಕಾಸರಗೋಡುರವರು ದೀಪ ಬೆಳಗಿಸಿ ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ರವರು ಮಾತನಾಡಿ ಪೂಜ್ಯರ ಆಶೀರ್ವಾದದಿಂದ ಭಜನಾ ಕ್ಷೇತ್ರದಲ್ಲಿ ಅಪಾರ ಬೆಳವಣಿಗೆಗಳು ಆಗಿದ್ದು ಮಂಡಳಿ ಹಾಗೂ ಮಂದಿರಗಳ ಮುಖಾಂತರ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳು ನಡೆಯುತ್ತಿದೆ ಇದರಲ್ಲಿ ಭಜನಾ ಪರಿಷತ್ ಸೇವೆ ಅಪಾರ ಎಂದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ರವರು 28ನೇ ವರ್ಷದ ಭಜನಾ ಕಮ್ಮಟದ ಬಗ್ಗೆ ಹಾಗೂ ನೂತನ ಸಮಿತಿಯ ಜವಾಬ್ದಾರಿಗಳ ಕುರಿತಾಗಿ ಮಾಹಿತಿ ನೀಡಿದರು. ಅದ್ಯಕ್ಷರಾಗಿ ಚಂದ್ರಶೇಖರ್, ಉಪಾಧ್ಯಕ್ಷರಾಗಿ ರಮೇಶ್, ಕಾರ್ಯದರ್ಶಿಗಳಾಗಿ ರಾಧಾಕೃಷ್ಣ ಅಡೂರು, ಜೊತೆ ಕಾರ್ಯದರ್ಶಿಯಾಗಿ ವೇಣುಗೋಪಾಲ, ಕೋಶಾಧಿಕಾರಿಯಾಗಿ ರೇಣುಕಾ ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಶಿವರಾಮ್, ಉದಯ್, ವಿಶ್ವನಾಥ್ ಆಯ್ಕೆಯಾದರು.

ವಲಯದ ಎಲ್ಲಾ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರಡ್ಕ  ವಲಯ ಮೇಲ್ವಿಚಾರಕರಾದ ಸುರೇಶ್ ಸ್ವಾಗತಿಸಿ, ಶಶಿಕಲಾ ಧನ್ಯವಾದವಿತ್ತರು. ಮುಳ್ಳೇರಿಯ ವಲಯ ಮೇಲ್ವಿಚಾರಕರ ರಮೇಶ್ ರವರು ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

ಜಾಹೀರಾತು

Responsive Advertisement