Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಂಜೇಶ್ವರ ಗೋವಿಂದ ಪೈ ಕಾಲೇಜು ಯೂನಿಯನ್‌ನ ಅಧ್ಯಕ್ಷ ಹರ್ಷಿತ್ ಶೇಣಿಗೆ ಬಣ್ಪುತ್ತಡ್ಕದಲ್ಲಿ ಅಭಿನಂದನೆ

ಪೆರ್ಲ : ಮಂಜೇಶ್ವರ ಗೋವಿಂದ ಪೈ ಕಾಲೇಜು ಯೂನಿಯನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಹರ್ಷಿತ್ ಶೇಣಿಗೆ ಬಣ್ಪುತ್ತಡ್ಕ ವಾರ್ಡಿನಲ್ಲಿ ಆತ್ಮೀಯ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಎಣ್ಮಕಜೆ ಗ್ರಾ.ಪಂ. ಸದಸ್ಯ ಶರತ್ಚಂದ್ರ ಶೆಟ್ಟಿ ಶೇಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಜಿ.ಪಂ.ಸದಸ್ಯ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಕುಸುಮಾವತಿ, ಉಪಾಧ್ಯಕ್ಷ ಸಿದ್ದಿಕ್ ವಳಮೊಗರು, ಸಿಡಿಎಸ್ ಅಧ್ಯಕ್ಷೆ ನವೀನ ಕುಮಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಿನ್ಸಿ ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ  ಮಾಜಿ.ಗ್ರಾ.ಪಂ.ಸದಸ್ಯ ಶಂಕರ ಎಂ.ಎಸ್.ಶೇರಿಫ್ ಕಟ್ಟದಮೂಲೆ, ಅಣ್ಣಪ್ಪ ನಾಯ್ಕ ಕೊಡ್ಯಲಮೂಲೆ ಉಪಸ್ಥಿತರಿದ್ದರು. ಪ್ರಕಾಶ್ ಕಾಪಿಕ್ಕಾಡು, ಜಯ ಪ್ರಕಾಶ್ ಬಣ್ಪುತ್ತಡ್ಕ ಕಾರ್ಯಕ್ರಮ ನಿರ್ವಹಿಸಿದರು. ಹರ್ಷಿತ್ ಅವರನ್ನು  ಬಣ್ಪತ್ತಡ್ಕ ಗೋಳಿಕಟ್ಟೆಯಿಂದ ಏಳ್ಕಾನದವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು.

Post a Comment

0 Comments

ಜಾಹೀರಾತು

Responsive Advertisement