ಕಾಸರಗೋಡು : ಗಿಫ್ಟೆಡ್ ಚಿಲ್ಡ್ರನ್ ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ‘ಕಲ್ಯಾಣ ಸೌಗಂಧಿಕಂ’ ಕಥೆಯನ್ನು ಆಧರಿಸಿದ ಕಾಸರಗೋಡಿನಲ್ಲಿ ಗಿಫ್ಟೆಡ್ ಚಿಲ್ಡ್ರನ್ ಕಾರ್ಯಕ್ರಮದಂಗವಾಗಿ ಓಟ್ಟಂ ತುಳ್ಳಲ್ ಪ್ರದರ್ಶನ ನಡೆಯಿತು.
‘ಕಲೆ ಮತ್ತು ಸಂಸ್ಕೃತಿ’ ವಿಷಯದಡಿ ಮಾಸಿಕ ಸೃಜನಶಾಲೆಯ ಭಾಗವಾಗಿ ಕಾಸರಗೋಡು ಜಿಎಸ್‌ಬಿಎಸ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫೋಕ್‌ಲ್ಯಾಂಡ್ ಪಯ್ಯನ್ನೂರು, ಇಂಟ್ಯಾಕ್ ಹಾಗೂ ಡಾರ್ಫ್ ಕೆಟಲ್ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಕರಿವೆಳ್ಳೂರು ರತ್ನಕುಮಾರ್ ಕಾಸರಗೋಡಿನಲ್ಲಿ ಗಿಫ್ಟೆಡ್ ಚಿಲ್ಡ್ರನ್ ಕಾರ್ಯಕ್ರಮದಂಗವಾಗಿ ಓಟ್ಟಂ ತುಳ್ಳಲ್ ಪ್ರದರ್ಶನ ಪ್ರದರ್ಶನ ನೀಡಿದರು. ಪೀತಾಂಬರನ್ ಕುರುಮತ್ತೂರು, ಮನೋಜ್ ವೆಳ್ಳೂರು ಹಾಗೂ ವಿನೋದ್ ಕಂಪಿಲ್ ವಾದ್ಯೋಪಕರಣಗಳಲ್ಲಿ ಸಹಕರಿಸಿದರು.
ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಸವಿತಾ ಪಿ., ಸಂಪನ್ಮೂಲ ತಂಡದ ಸದಸ್ಯರಾದ ನಂದಿಕೇಶನ್ ಎನ್. (ನಿವೃತ್ತ ಡಿಡಿಇ), ದಿವ್ಯಾಂಗನಾ ಟೀಚರ್, ಸಂಯೋಜಕ ಮಿನಿಷ್ ಬಾಬು ಕೆ., ಫೋಕ್‌ಲ್ಯಾಂಡ್ ಪದಾಧಿಕಾರಿಗಳಾದ ಸುರೇಶ್ ಕೆ. ಹಾಗೂ ರಜಿತಾ ವಿ.ಎಂ. ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿದಂತೆ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು

0 Comments