ಕಿದೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಕುಂಬಳೆ ವಲಯ ಮಂಜೇಶ್ವರ ತಾಲೂಕಿನ ವತಿಯಿಂದ 'ಜನಮಂಗಲ' ಕಾರ್ಯಕ್ರಮದಡಿಯಲ್ಲಿ ಪೂಜ್ಯ ಖಾವಂದರು ಮಂಜೂರು ಮಾಡಿರುವ ವೀಲ್ ಚೇರ್‌ಗಳನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಕಿದೂರು ಗ್ರಾಮದ ನಿವಾಸಿಗಳಾದ ಲೀಲಾ ಹಾಗೂ ಬಟ್ಯ ಮೂಲ್ಯ ಅವರಿಗೆ ಮಂಜೇಶ್ವರ ತಾಲೂಕಿನ ಮಾನ್ಯ ಯೋಜನಾಧಿಕಾರಿ ಶಶಿಕಲಾ ಸುವರ್ಣ ಅಧಿಕೃತವಾಗಿ ವೀಲ್ ಚೇರ್‌ಗಳನ್ನು ವಿತರಿಸಿದರು.
ಅಂಗವಿಕಲರು ಹಾಗೂ ಅಶಕ್ತರ ಜೀವನಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 'ಜನಮಂಗಲ' ಯೋಜನೆಯ ಮೂಲಕ ಉಚಿತವಾಗಿ ಸಹಕಾರ ಉಪಕರಣಗಳನ್ನು ನೀಡಲಾಗುತ್ತಿದೆ.

0 Comments