ಕೊಚ್ಚಿ: ಕೆಎಸ್‌ಆರ್‌ಟಿಸಿಗೆ ಬಸ್ ಖರೀದಿಸಲು ಅಂಗಮಾಲಿ ಮೂಲದ ಉದ್ಯಮಿಯೊಬ್ಬರು 40 ಲಕ್ಷ ರೂಗಳ ಚೆಕ್‌ನ್ನು ಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸಿದ್ದಾರೆ.
ಹೀಮಾನ್ ರೋಬೋಟಿಕ್ ಕಾರ್ ಪಾರ್ಕಿಂಗ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಜೋಸ್ ಅವರು ಈ ಕೊಡುಗೆ ನೀಡಿದ್ದಾರೆ. ಮುಖ್ಯಮಂತ್ರಿಯವರ ಮನವಿಗೆ ಸ್ಪಂದಿಸಿ ಬಸ್ ಖರೀದಿಸಲು ಹಣ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿ ಆರ್ಥಿಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬಸ್ ಖರೀದಿಸಲು ಮುಂದಾಗಿದ್ದು, ಬಸ್‌ನ್ನು ಅಂಗಮಾಲಿ ಡಿಪೋಗೆ ನೀಡಲಾಗುವುದು ಎಂದು ಜೋಸ್ ತಿಳಿಸಿದ್ದಾರೆ.
ಕೇರಳದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಯೊಂದು ಕೆಎಸ್‌ಆರ್‌ಟಿಸಿಗೆ ಬಸ್ ಖರೀದಿಸಿ ನೀಡುತ್ತಿದೆ ಎಂದು ಸಚಿವ ರೋಜಿ ಎಂ. ಜಾನ್ ತಿಳಿಸಿದ್ದಾರೆ.

0 Comments