ತಿರುವನಂತಪುರ : ಗಂಭೀರ ಅಕ್ರಮಗಳು ಪತ್ತೆಯಾದ ಹಿನ್ನೆಲೆಯಲ್ಲಿ ವಿಸರ್ಜಿಸಲಾದ ಮಲಬಾರ್ ಮಿಲ್ಮಾ ಪ್ರಾದೇಶಿಕ ಒಕ್ಕೂಟದ ಆಡಳಿತ ಮಂಡಳಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ಕೇರಳ ಸರ್ಕಾರ ತ್ರಿಸದಸ್ಯ ತಂಡವನ್ನು ನೇಮಿಸಿದೆ.
ಮಿಲ್ಮಾ ಜಂಟಿ ನಿರ್ದೇಶಕರ ನೇತೃತ್ವದ ತಂಡವು ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಕಾಸರಗೋಡು ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ವಿವರವಾದ ತನಿಖೆ ನಡೆಸಲಿದೆ.
ತನಿಖಾ ವರದಿಯಲ್ಲಿ ಗಂಭೀರ ಕಾನೂನು ಉಲ್ಲಂಘನೆಗಳು ಪತ್ತೆಯಾದರೆ ವಿಜಿಲೆನ್ಸ್ ತನಿಖೆಗೆ ಶಿಫಾರಸು ಮಾಡುವ ಸಾಧ್ಯತೆಯಿದೆ. ದೊಡ್ಡ ಪ್ರಮಾಣದ ಅಕ್ರಮಗಳು ಸೇರಿದಂತೆ ಗಂಭೀರ ವಿಷಯಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಂದು ಮಲಬಾರ್ ಮಿಲ್ಮಾ ಒಕ್ಕೂಟದ ಆಡಳಿತ ಮಂಡಳಿಯನ್ನು ವಿಸರ್ಜಿಸಿ, ಆಡಳಿತವನ್ನು ಆಡಳಿತಾಧಿಕಾರಿಗೆ ಹಸ್ತಾಂತರಿಸಲಾಗಿತ್ತು.

0 Comments