Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಂಜೇಶ್ವರ ಗೋವಿಂದ ಪೈ ಕಾಲೇಜು ಯೂನಿಯನ್‌ನ ಅಧ್ಯಕ್ಷ ಹರ್ಷಿತ್ ಗೆ ಶೇಣಿ ರಾಜೀವ್ ಭವನದಲ್ಲಿ ಅಭಿನಂದನೆ

ಪೆರ್ಲ : ಮಂಜೇಶ್ವರ ಗೋವಿಂದ ಪೈ ಕಾಲೇಜು ಯೂನಿಯನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಹರ್ಷಿತ್ ಶೇಣಿಗೆ ಶೇಣಿಯ ರಾಜೀವ್ ಭವನ ಕಚೇರಿಯಲ್ಲಿ ಆತ್ಮೀಯ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಹರ್ಷಿತ್ ಅವರ ಅಭಿಮಾನಿಗಳು ಉಪಸ್ಥಿತರಿದ್ದು, ಅವರ ಆಯ್ಕೆಗೆ ಶುಭ ಹಾರೈಸಿದರು. ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ವಿದ್ಯಾರ್ಥಿಗಳ ಹಿತಕ್ಕಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮುಖಂಡರು ಹರ್ಷಿತ್ ಅವರಿಗೆ ಶುಭಕೋರಿದರು.

ಡಿಸಿಸಿ ಪ್ರಧಾನ ಕಾರ್ಯದರ್ಶಿ, ಜಿ.ಪಂ.ಸದಸ್ಯ ಸೋಮಶೇಖರ್ ಜೆ.ಎಸ್, ಎಣ್ಮಕಜೆ ಗ್ರಾ.ಪಂ.ಸದಸ್ಯ ಶರತ್ಚಂದ್ರ ಶೆಟ್ಟಿ ಶೇಣಿ, ಪಕ್ಷದ ಪ್ರಮುಖರಾದ ಉಮ್ಮರ್ ಕಂಗಿನಮೂಲೆ, ನಜಿಬುಲ್ಲ ಶೇಣಿ, ರಾಘವೇಂದ್ರ ನಾಯಕ್, ಎಸ್.ಯು.ಅಬ್ದುಲ್ಲ ಶೇಣಿ, ಮೊಯ್ದಿನ್ ಕುಟ್ಟಿ ಶೇಣಿ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement