Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮುಳಿಯಾರ್ ಪಂಚಾಯತ್ ಘಟಕದ ಪಿಂಚಣಿದಾರರ ವಾರ್ಷಿಕ ಸಮ್ಮೇಳನ

ಬೋವಿಕ್ಕಾನ : ಕೇರಳ ರಾಜ್ಯ ಸರ್ಕಾರಿ ಪಿಂಚಣಿದಾರರ ಸಂಘ (KSPS) ಮುಳಿಯಾರ್ ಘಟಕದ ವಾರ್ಷಿಕ ಸಮ್ಮೇಳನವು  ಬೋವಿಕ್ಕಾನ ಕೇಶವ ಸ್ಮೃತಿ ಮಂದಿರದಲ್ಲಿ ನಡೆಯಿತು.

ಪೂರ್ಣ ರೂಪದ ವಂದೇ ಮಾತರಂ ಗೀತೆಯೊಂದಿಗೆ ಆರಂಭವಾದ ಸಮ್ಮೇಳನದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಸುರೇಶ್ ಬಿ.ಎಸ್. ವಹಿಸಿದ್ದರು. ಕಾಸರಗೋಡು ಬ್ಲಾಕ್ ಕಾರ್ಯದರ್ಶಿ ರಾಜೇಂದ್ರ ಕುಂಟಾರು ಸಮ್ಮೇಳನವನ್ನು ಉದ್ಘಾಟಿಸಿ, ಪಿಂಚಣಿದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಮೆಡಿಸೆಪ್ ಯೋಜನೆಯ ಕುರಿತು ಮಾಹಿತಿ ನೀಡಿದರು.

ಕಾಸರಗೋಡು ಜಿಲ್ಲಾ KSPS ಕಾರ್ಯದರ್ಶಿ ಕುಂಞಿರಾಮ ಕೇಳೋತ್ ಮಾತನಾಡಿ, ಪಿಂಚಣಿದಾರರಿಗೆ ಲಭಿಸುತ್ತಿರುವ ಸೌಲಭ್ಯಗಳನ್ನು ಸಂರಕ್ಷಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದರು. ಅಧ್ಯಾಪಕ ಸಮುದಾಯವೂ ಸಮಾಜದ ಪ್ರಮುಖ ಸಮುದಾಯವಾಗಿದ್ದು, ಜೀವನದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಸಂಘಟನೆ ಮತ್ತು ಒಗ್ಗಟ್ಟು ಅಗತ್ಯವೆಂದು ತಿಳಿಸಿದರು.

ಮುಳಿಯಾರ್ ಘಟಕದ ಗೌರವಾಧ್ಯಕ್ಷ ಕರುಣಾಕರ ಮಾಸ್ಟರ್ ಮಾತನಾಡಿ, ಸಂಘಟನೆ ಅತ್ಯಂತ ಮುಖ್ಯವಾಗಿದ್ದು, ಸಂಘಟನೆಯಿಲ್ಲದೆ ಯಾವುದೇ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಿಲ್ಲ ಎಂದರು.

ಘಟಕದ ಉಪಾಧ್ಯಕ್ಷ ಗೋವಿಂದ ಭಟ್ ಬಳ್ಳಮೂಲೆ ಸಂಘದ ವಿವಿಧ ವಿಚಾರಗಳ ಕುರಿತು ಮಾತನಾಡಿದರು. ಜಿಲ್ಲಾ ಉಪಕಾರ್ಯದರ್ಶಿ ನಾರಾಯಣ ಮಾಸ್ಟರ್ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ದೇಲಂಪಾಡಿ ಪಂಚಾಯತ್ ಘಟಕದ ಕಾರ್ಯದರ್ಶಿ ರವೀಂದ್ರ ರಾವ್ ಮಾತನಾಡಿ, ಸಂಘದ ಬೆಳವಣಿಗೆಗೆ ಪ್ರತಿಯೊಬ್ಬ ಸದಸ್ಯರ ಪ್ರಯತ್ನವೂ ಅಗತ್ಯ ಎಂದರು.

ಘಟಕದ ಕಾರ್ಯದರ್ಶಿ ವಿಮಲ ರೈ ಕೊಡವಂಜಿ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ರಾಮಣ್ಣ ರೈ ವಂದಿಸಿದರು. ಸಭೆಯಲ್ಲಿ ಮುಳಿಯಾರ್ ಘಟಕದ ಹಾಲಿ ಸಮಿತಿಯನ್ನೇ ಮುಂದುವರಿಸಲು ತೀರ್ಮಾನಿಸಲಾಯಿತು. ಬ್ಲಾಕ್ ಪ್ರತಿನಿಧಿಯಾಗಿ ಒಬ್ಬರನ್ನು ಹಾಗೂ ಜಂಟಿ ಕಾರ್ಯದರ್ಶಿಯಾಗಿ ಮತ್ತೊಬ್ಬರನ್ನು ನೇಮಕ ಮಾಡಲಾಯಿತು.

Post a Comment

0 Comments

ಜಾಹೀರಾತು

Responsive Advertisement