Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅ.4ರಂದು ನಾರಾಯಣಮಂಗಲದ ಶ್ರೀನಿಧಿ ನಿಲಯದಲ್ಲಿ ಮನಸ್ಸಿನಿ ಮಹಿಳಾ ವೇದಿಕೆಯ ‘ಮನೆ ಮನೆ ಅಭಿಯಾನ’

ಕುಂಬಳೆ : ಅಕ್ಟೋಬರ್ 4ರಂದು ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ 'ಮನಸ್ಸಿನಿ ಮಹಿಳಾ ವೇದಿಕೆ'ಯ ‘ಮನೆ ಮನೆ ಅಭಿಯಾನ’ದ ಅಂಗವಾಗಿ ಕಥಾಗೋಷ್ಠಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು  ನಾರಾಯಣ ಮಂಗಲದಲ್ಲಿರುವ ಸಾಹಿತಿ ಹಾಗೂ ಶಿಕ್ಷಣ ತಜ್ಞರಾದ  ವಿ.ಬಿ. ಕುಳಮರ್ವ ಅವರ ಮನೆ 'ಶ್ರೀನಿಧಿ ನಿಲಯ'ದಲ್ಲಿ ಆಯೋಜಿಸಲಾಗಿದೆ.

 ಕಾರ್ಯಕ್ರಮವನ್ನು ಸಾಹಿತಿ ಹಾಗೂ ಶಿಕ್ಷಣ ತಜ್ಞರಾದ ವಿ.ಬಿ. ಕುಳಮರ್ವ ಮತ್ತು ವಿಶ್ರಾಂತ ವಿದ್ಯಾಧಿಕಾರಿ  ಲಲಿತಾಲಕ್ಷ್ಮೀ ಕುಳಮರ್ವ ಉದ್ಘಾಟಿಸುವರು. ಜನಪ್ರಿಯ ಕಾದಂಬರಿಕಾರರಾದ  ಪ್ರಸನ್ನಾ ವಿ. ಚೆಕ್ಕೆಮನೆ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಬಳಿಕ ನಡೆಯುವ ಕಥಾಗೋಷ್ಠಿಯ ಅಧ್ಯಕ್ಷತೆಯನ್ನು ಕೊಚ್ಚಿಯ ಪ್ರಾಧ್ಯಾಪಕಿ ಡಾ. ಪರಿಣಿತ ರವಿ ವಹಿಸಲಿದ್ದಾರೆ.

ಕಥಾಗೋಷ್ಠಿಯಲ್ಲಿ  ಪ್ರಸನ್ನಾ ವಿ. ಚೆಕ್ಕೆಮನೆ, ಸತ್ಯವತಿ ಭಟ್ ಕೊಳಚಪ್ಪು, ಪಾರ್ವತಿ ಕುಳಕೋಡ್ಲು, ಸೀತಾಲಕ್ಷ್ಮಿ ವರ್ಮ, ಧನ್ಯಶ್ರೀ ಸರಳಿ,ಸುಮಿತ್ರ ಎರ್ಪಕಟ್ಟೆ, ಸರ್ವಮಂಗಳಾ ಪುಣಿಂಚಿತ್ತಾಯ ಹಾಗೂ ಅನುಪಮಾ ಉಡುಪ ಮೂಲೆ ಭಾಗವಹಿಸಲಿದ್ದಾರೆ. ಸುಶೀಲಾ ಪದ್ಯಾಣ, ಲಕ್ಷ್ಮೀ ವಿ. ಭಟ್, ಜ್ಯೋತ್ಸಾ ಕಡಂದೇಲು ಪ್ರಮೀಳಾ ಚುಳ್ಳಿಕಾನ ಉಪಸ್ಥಿತರಿರುವರು.

Post a Comment

0 Comments

ಜಾಹೀರಾತು

Responsive Advertisement