Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪಡುಕುತ್ಯಾರಿನಲ್ಲಿ ಅಷ್ಟೋತ್ತರ ಸಹಸ್ರ ಮೃತಿಕಾ ಲಿಂಗಾರ್ಚನೆ, ಶತರುದ್ರ ಯಾಗ

ಪಡುಕುತ್ಯಾರು :  ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದಲ್ಲಿ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯ 22ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಹಾಗೂ ಸುವರ್ಣ ಜನ್ಮವರ್ಧಂತಿ ವರ್ಷಾಚರಣೆ ಅಂಗವಾಗಿ ಸರಸ್ವತಿ ಪೂರ್ವ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಅಷ್ಟೋತ್ತರ ಸಹಸ್ರ ಮೃತಿಕಾ ಲಿಂಗಾರ್ಚನೆ, ಶತರುದ್ರ ಯಾಗ ಭಾನುವಾರ ಸರಸ್ವತಿ ಯಾಗಶಾಲೆಯಲ್ಲಿ ನಡೆಯಿತು. ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮಹಾಂಗಳಾರತಿ ನೇರವೇರಿಸಿದರು. ಆಸ್ಥಾನ ವಿದ್ವಾಂಸ ಶಂಕರಾ ಚಾರ್ಯ ಕಡ್ಡಾಸ್ಕರ್, ವೀರರಾಘವ ಶರ್ಮ ಚಾಡಿ ತರ್ಲ, ಶ್ರೀಧರ ಪುರೋಹಿತ್, ಅಕ್ಷಯ ಶರ್ಮ ಕಟಪಾಡಿ, ಶಿವಕುಮಾರ್ ಶರ್ಮ, ಶಿವರಾಜ್ ಶರ್ಮ, ಮನೋಜ್ ಶರ್ಮ ವೈದಿಕ ನೇತೃತ್ವ ವಹಿಸಿದ್ದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡರಾದ ಪ್ರಮೋದ್ ಮಧ್ವರಾಜ್, ಕೆ.ರಘುಪತಿ ಭಟ್, ಮಂಜುಳಾ ಸುವರ್ಣ, ಶಿಲ್ಪಾಜಿ ಸುವರ್ಣ, ವಿ.ಶ್ರೀಧರ ಆಚಾರ್ಯ , ಗಂಗಾಧರಾಚಾರ್ಯ ಉಡುಪಿ, ಸೂರ್ಯ ಕುಮಾರ್ ಹಳೆ ಅಂಗಡಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ದಿನೇಶ್ ಆಚಾರ್ಯ ಕೆ.ಮಣ್ಣು, ಪ್ರಶಾಂತ್ ಆಚಾರ್ಯ ಕಟಪಾಡಿ, ಗುರುರಾಜ್ ಆಚಾರ್ಯ ಮಂಗಳೂರು, ವಿಠಲ್ ಆಚಾರ್ಯ ಎಲ್ಲೂರು, ಸುಂದರಾಚಾರ್ಯ ಬೆಳುವಾಯಿ, ತ್ರಾಸಿ ಸುಧಾಕರ ಆಚಾರ್ಯ, ಚಂದ್ರಯ್ಯ ಆಚಾರ್ಯ ಕಳಿ, ಲೋಲಾಕ್ಷ ಶರ್ಮ, ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಅರವಿಂದ ವೈ.ಆಚಾರ್ಯ ಬೆಳುವಾಯಿ ಭಾಗವಹಿಸಿದ್ದರು.

ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ, ಎಸ್‌ಕೆಎಫ್ ಮಾಲೀಕ ಜಿ.ರಾಮಕೃಷ್ಣ ಆಚಾರ್ಯ ಮೂಡು ಬಿದಿರೆ, ಬೆಂಗಳೂರು ಶಾಖಾ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಬೆಂಗಳೂರು, ರಾಘವೇಂದ್ರ ಆಚಾರ್ಯ ಕಾರವಾರ, ಕೋಟೆಕಾರು ನೆಲ್ಲಿಸ್ಥಳ ಕಾಳಿಕಾಂಬ ದೇವಸ್ಥಾನ, ಕಾರ್ಕಳ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ, ಪರಶಿವ ವಿಶ್ವಕರ್ಮೇಶ್ವರ ದೇವಸ್ಥಾನ ಕಾಞಂಗಾಡು ವತಿಯಿಂದ ಪಾದಪೂಜೆ ನಡೆಯಿತು.

ಮಣ್ಣಿನಿಂದ ತಯಾರಿಸಲಾದ 1008 ಶಿವಲಿಂಗಗಳ ಪ್ರತಿಷ್ಠಾಪನೆ, ಅಷ್ಟೋತ್ತರ ಶತ ಸಹಸ್ರ ಶಿವಲಿಂಗಗಳ ಅರ್ಚನೆ, ಶತ ರುದ್ರಯಾಗ ನಡೆಯಿತು. ಜಗದ್ಗುರುಗಳವರ ಜನ್ಮ ವರ್ಧಂತಿಯ ಸುವರ್ಣ ಸಂಭ್ರಮದ ಅಂಗವಾಗಿ  ರಾಜೇಶ್ ರಾವ್ ಬಾಗಲೋಡಿ ಇವರ 50 ಶಿಷ್ಯಂದಿರಿಂದ  ಕೊಳಲು ವಾದನ ನಡೆಯಿತು.

Post a Comment

0 Comments

ಜಾಹೀರಾತು

Responsive Advertisement