ಕುಂಬಳೆ : ತೊಕ್ಕೊಟ್ಟಿಗೆ ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ. ಸೀತಾಂಗೋಳಿ ಎಡನಾಡ್ ಸಹಕಾರಿ ಬ್ಯಾಂಕ್ ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದ ಎ.ಕೆ. ಸಂತೋಷ್ (38) ನಾಪತ್ತೆಯಾಗಿದ್ದಾರೆ.
2026 ಜೂನ್ 13ರಂದು ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಸಂತೋಷ್ ಬಳಿಕ ಮನೆಗೆ ಮರಳಿಲ್ಲ ಎಂದು ಅವರ ಸಹೋದರಿ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

0 Comments