Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸೇವಾ ಪಿಂಚಣಿಗಾರರ ತುಟ್ಟಿ ಭತ್ಯೆ, ಮೆಡಿಸೆಪ್ ವಿಚಾರದಲ್ಲಿ ಸರಕಾರ ತುರ್ತು ಮಧ್ಯಸ್ಥಿಕೆ ವಹಿಸಬೇಕು: ಕೆಎಸ್‌ಎಸ್‌ಪಿಎ ಬದಿಯಡ್ಕ ಮಂಡಲ ವಾರ್ಷಿಕ ಸಮ್ಮೇಳನ ಆಗ್ರಹ

ಬದಿಯಡ್ಕ: ಸೇವಾ ಪಿಂಚಣಿದಾರರಿಗೆ ತುಟ್ಟಿಭತ್ಯೆ ಹಾಗೂ ಮೆಡಿಸೆಪ್ ಆರೋಗ್ಯ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ತುರ್ತು ಮಧ್ಯಸ್ಥಿಕೆ ವಹಿಸಬೇಕೆಂದು ಕೆಎಸ್‌ಎಸ್‌ಪಿಎ ಬದಿಯಡ್ಕ ಮಂಡಲದ ವಾರ್ಷಿಕ ಸಮ್ಮೇಳನ ಆಗ್ರಹಿಸಿದೆ.

ಬದಿಯಡ್ಕದಲ್ಲಿ ನಡೆದ ಸಮ್ಮೇಳನವನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಉದ್ಘಾಟಿಸಿದರು. ಕೆಎಸ್‌ಎಸ್‌ಪಿಎ ಮಂಡಲ ಅಧ್ಯಕ್ಷ ಚಂದ್ರಹಾಸನ್ ನಂಬ್ಯಾರ್ ಅಧ್ಯಕ್ಷತೆ ವಹಿಸಿದ್ದರು.

ಕಾಸರಗೋಡು ವಿಧಾನಸಭಾ ಮಂಡಲ ಅಧ್ಯಕ್ಷ ಎಂ. ಕೇಶವನ್, ಕಾರ್ಯದರ್ಶಿ ಸೀತಾರಾಮ ಮಲ್ಲ, ಕೋಶಾಧಿಕಾರಿ ಟಿ.ಕೆ. ಶ್ರೀಧರನ್, ಮುಹಮ್ಮದಾಲಿ ಪಿ., ಸರಸೀರುಹಾಕ್ಷನ್ ನಂಬ್ಯಾರ್, ರಜನಿ ಎಸ್.ಎಂ., ಬದರುದ್ದೀನ್, ಕುಮಾರನ್, ಕೃಷ್ಣನ್ ಕಲ್ಲಕಟ್ಟೆ ಹಾಗೂ ನಾರಾಯಣ ನಾಯ್ಕ್ ಮಾತನಾಡಿದರು.

ಕಾರ್ಯದರ್ಶಿ ರಜನಿ ವರದಿ ಮಂಡಿಸಿದರು. ಕೋಶಾಧಿಕಾರಿ ಕೃಷ್ಣದಾಸ್ ಲೆಕ್ಕಪತ್ರ ಮಂಡಿಸಿದರು. ನೂತನವಾಗಿ ಸದಸ್ಯತ್ವ ಸ್ವೀಕರಿಸಿದ ಅಬ್ದುಲ್ಲಕುಂಞಿ ಅವರನ್ನು ಸನ್ಮಾನಿಸಲಾಯಿತು.

ಸಂಘಟನೆಯ ನೂತನ ಪದಾಧಿಕಾರಿಗಳಾಗಿ ಚಂದ್ರಹಾಸನ್ ನಂಬ್ಯಾರ್ (ಅಧ್ಯಕ್ಷ), ಕೃಷ್ಣದಾಸ್ (ಕಾರ್ಯದರ್ಶಿ) ಹಾಗೂ ರಜನಿ ಎಂ.ಎಸ್. (ಕೋಶಾಧಿಕಾರಿ) ಆಯ್ಕೆಯಾದರು.

Post a Comment

0 Comments

ಜಾಹೀರಾತು

Responsive Advertisement