Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮೈಸೂರು ದಸರಾ ಚಿಗುರು ಕವಿಗೋಷ್ಠಿಗೆ ಮಾಯಿಪ್ಪಾಡಿಯ ಚಿಗುರು ಪ್ರತಿಭೆ ಪ್ರಣಮ್ಯ ಕೆ.ಎಸ್. ಆಯ್ಕೆ

ಮಾಯಿಪಾಡಿ : ಮೈಸೂರು ದಸರಾ ಬಹುರೂಪಿ ಕವಿಗೋಷ್ಠಿ-2026ರ ಚಿಗುರು ಕವಿಗೋಷ್ಠಿಗೆ ಕಾಸರಗೋಡು ಮೊಗ್ರಾಲ್ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರಣಮ್ಯ ಕೆ.ಎಸ್. ಅವರ ಕವನ ಆಯ್ಕೆಯಾಗಿದೆ.

ಅ.15ರಂದು ಮೈಸೂರಿನ ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಅಗ್ರಹಾರ ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಚಿಗುರು ಕವಿಗೋಷ್ಠಿಯಲ್ಲಿ ಪ್ರಣಮ್ಯ ಕವನ ವಾಚನ ಮಾಡಲಿದ್ದಾರೆ.

ಇತ್ತೀಚೆಗೆ ಜಿ.ಎಚ್.ಎಸ್.ಎಸ್. ಬಲ್ಲಾ ಈಸ್ಟ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ 32 ಕೆ.ಜಿ.ಗಿಂತ ಕಡಿಮೆ ತೂಕದ ಕರಾಟೆ ಸ್ಪರ್ಧೆಯಲ್ಲಿ ಪ್ರಣಮ್ಯ ದ್ವಿತೀಯ ಬಹುಮಾನ ಗಳಿಸಿದ್ದರು. 'ಚಿಗುರು' ಇವರ ಪ್ರಕಟಿತ ಕವನ ಸಂಕಲನವಾಗಿದೆ. ಮಾಯಿಪ್ಪಾಡಿಯ ಪ್ರಸಾದ್ ಕೆ.ಎಸ್. ಮತ್ತು ಡಾ. ಸೌಮ್ಯ ಪಿ. ದಂಪತಿಯ ಪುತ್ರಿಯಾಗಿರುವ ಪ್ರಣಮ್ಯ, ಓದಿನ ಜೊತೆಗೆ ಸಾಹಿತ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement