ಪೆರ್ಲ : ಇಡಿಯಡ್ಕದ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಇಂದು ಪೂರ್ವಾಹ್ನ ಆರಂಭಗೊಂಡಿತು. ಕ್ಷೇತ್ರ ಅರ್ಚಕ ಕೃಷ್ಣರಾಜ ಪುಣಿಂಚಿತ್ತಾಯ ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆಗೆ ಚಾಲನೆ ನೀಡಿದರು. ಕ್ಷೇತ್ರ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಉಳ್ಳಾಲ್ತಿ ಭಜನಾ ಸಂಘ, ಇಡಿಯಡ್ಕ ಹಾಗೂ ನಲ್ಕ ಶ್ರೀ ವಾಗ್ರೇವಿ ಭಜನಾ ಸಂಘದವರಿಂದ ಭಜನೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಪ್ರಸಾದ ವಿತರಣೆ ನಡೆಯಿತು. ನೂರಾರು ಭಕ್ತರು ಭಾಗವಹಿಸಿದ್ದರು.
ನಾಳೆ ಅ.12, ಸೋಮವಾರ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ, ಬಜಕೂಡ್ಲು ಭಜನೆ, ಅ.13, ಮಂಗಳವಾರ ಶ್ರೀರಾಮ ಭಜನಾ ತಂಡ, ಆನಡ್ಕ–ಪುತ್ತೂರು ಭಜನೆ, ಅ.14, ಬುಧವಾರ ಶ್ರೀ ಅಯ್ಯಪ್ಪಸ್ವಾಮಿ ಮಹಿಳಾ ಭಜನಾ ಸಂಘ, ಶೇಣಿ – ಮಣಿಯಂಪಾರೆ ಭಜನೆ, ಅ.15, ಗುರುವಾರ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಭಜನಾ ಮಂಡಳಿ, ಪೆರ್ಲ ಭಜನೆ, ಅ.16, ಶುಕ್ರವಾರ ಬೆಳಗ್ಗೆ ಗಾನ ಭಜನ್ಸ್, ಪೆರ್ಲ ವತಿಯಿಂದ ಭಜನೆ. ಸಂಜೆ 6ರಿಂದ 7.30ರವರೆಗೆ ಶ್ರೀ ಉಳ್ಳಾಲ್ತಿ ಭಜನಾ ಸಂಘ, ಇಡಿಯಡ್ಕ ವತಿಯಿಂದ ಭಜನೆ. ಅ.17, ಶನಿವಾರ ಶ್ರೀ ಸತ್ಯನಾರಾಯಣ ಭಜನಾ ಸಂಘ, ಪೆರ್ಲ ಭಜನೆ, ಅ.18, ಭಾನುವಾರ ಬೆಳಗ್ಗೆ ಸುಮಶ್ರೀ ಇಡಿಯಡ್ಕ ಮತ್ತು ಬಳಗದಿಂದ ಭಜನೆ. ಸಂಜೆ 6ರಿಂದ 7.30ರವರೆಗೆ ಏಕದಂತ ಕುಣಿತ ಭಜನಾ ಸಂಘ, ಪೆರ್ಲ ವತಿಯಿಂದ ಭಜನೆ ಕಾರ್ಯಕ್ರಮ. ಅ.19, ಸೋಮವಾರ ಬೆಳಗ್ಗೆ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂಡಳಿ, ಬಣ್ಣುತ್ತಡ್ಕ ವತಿಯಿಂದ ಭಜನೆ. ಸಂಜೆ 6ರಿಂದ 7.30ರವರೆಗೆ ಶ್ರೀ ಅಯ್ಯಪ್ಪಸ್ವಾಮಿ ಕುಣಿತ ಭಜನಾ ಸಂಘ, ಪೆರ್ಲ ವತಿಯಿಂದ ಭಜನಾ ಕಾರ್ಯಕ್ರಮ. ಅ.20, ಮಂಗಳವಾರ ಬೆಳಗ್ಗೆ ಶ್ರೀ ರಾಘವೇಂದ್ರ ಭಜನಾ ಮಂಡಳಿ (ರಿ.), ಪ್ರಹ್ಲಾದಪುರ–ಬಾಕಿಲಪದವು ವತಿಯಿಂದ ಭಜನೆ. ಬೆಳಗ್ಗೆ 8ರಿಂದ ಆಯುಧಪೂಜೆ ನಡೆಯಲಿದೆ. ಸಂಜೆ 6ರಿಂದ 7.30ರವರೆಗೆ ಶ್ರೀಕೃಷ್ಣ ಕುಣಿತ ಭಜನಾ ಮಂಡಳಿ, ಏಳ್ಳಾನ ವತಿಯಿಂದ ಭಜನಾ ಕಾರ್ಯಕ್ರಮ.
ಅ.21, ಬುಧವಾರ ಬೆಳಗ್ಗೆ ಶ್ರೀ ರಾಜರಾಜೇಶ್ವರಿ ಭಜನಾ ಸಂಘ, ಮಾಯಿಪ್ಪಾಡಿ ವತಿಯಿಂದ ಭಜನೆ ನಡೆಯಲಿದೆ. ಬೆಳಗ್ಗೆ 9ರಿಂದ 11ರವರೆಗೆ ವಿದ್ಯಾರಂಭ (ಅಕ್ಷರಾಭ್ಯಾಸ) ಹಾಗೂ ನವಾನ್ನ ಸಮರ್ಪಣೆ ಜರುಗಲಿದೆ. ನವರಾತ್ರಿ ಪ್ರಯುಕ್ತ ಅಕ್ಟೋಬರ್ 18, 19 ಮತ್ತು 20ರಂದು ರಾತ್ರಿ 7.30ಕ್ಕೆ ವಿಶೇಷ ಪೂಜೆ ನಡೆಯಲಿದೆ.


0 Comments