Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕೊರಕೋಡು ಟೈಗರ್ಸ್ ವತಿಯಿಂದ ಎಸ್.ವಿ.ಟಿ. ಟೈಗರ್ಸ್ ತಂಡದ ಸಾರಥಿಗೆ ಗೌರವಾರ್ಪಣೆ

ಕಾಸರಗೋಡು: ನವರಾತ್ರಿ ಉತ್ಸವದ ನವಮಿಯಂದು 'ಕೊರಕೋಡು ಟೈಗರ್ಸ್' ನೇತೃತ್ವದಲ್ಲಿ 22ನೇ ವರುಷದ ಹುಲಿವೇಷದ ಮುನ್ನುಡಿಯಾಗಿ ಜರಗಿದ ಊದುಪೂಜಾ ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ಕಾಸರಗೋಡಿನ ಹುಲಿವೇಷ ತಂಡವನ್ನು 40 ವರುಷಗಳಿಂದ ನೇತೃತ್ವ ವಹಿಸಿ ಇತಿಹಾಸ ಸೃಷ್ಟಿಸಿದ  ಎಸ್.ವಿ.ಟಿ.ಯ ಹುಲಿ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ಅವರನ್ನು ಧಾರ್ಮಿಕ ನೇತಾರ  ರವೀಶ ತಂತ್ರಿ ಕುಂಟಾರು ಅವರ ಉಪಸ್ಥಿತಿಯಲ್ಲಿ ಶಾಲು, ಪೇಟ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವನಾಥ ಮಣಿಯಾಣಿ ಕೊರಕೋಡು, ರಾಜೇಶ್ ಪ್ರಭು ಬಟ್ಟಂಪಾರೆ, ರಾಜೇಶ್ ನುಳ್ಳಿಪ್ಪಾಡಿ, ಮುರಳೀ ಮಾಸ್ಟರ್, ಹರೀಶ, ನಗರಸಭಾ ಸದಸ್ಯ ಮಧುಕರ ಉಪಸ್ಥಿತರಿದ್ದರು.  ಗೋಕುಲ್ ಝೂಮ್, ಪ್ರವೀಣ್ ಕೊರಕೋಡು ಇವರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Post a Comment

0 Comments

ಜಾಹೀರಾತು

Responsive Advertisement