ನೆಕ್ರಾಜೆ : ಪಾಡಿ ನೆಕ್ರಾಜೆ ಮಹಿಳಾ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಕೆ. ರಾಮಕೃಷ್ಣನ್ ಅವರಿಗೆ ಕೆಸಿಇಯು ಘಟಕ ಸಮಿತಿಯ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಕೆಸಿಇಯು ಏರಿಯಾ ಕಾರ್ಯದರ್ಶಿ ಬಿ. ರಾಧಾಕೃಷ್ಣನ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಘಟಕದ ಅಧ್ಯಕ್ಷ ಬಿ.ಕೆ. ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಿರಿ ಕೃಷ್ಣನ್, ಸಿಪಿಐಎಂ ಲೋಕಲ್ ಕಾರ್ಯದರ್ಶಿ ಎಂ. ಗಿರೀಶ್ ಹಾಗೂ ಪಿ.ಕೆ. ರಾಮಕೃಷ್ಣನ್ ಮಾತನಾಡಿದರು. ಕೆಸಿಇಯು ಘಟಕ ಕಾರ್ಯದರ್ಶಿ ಸುರೇಶ್ ಪೈಕ್ಕ ಸ್ವಾಗತಿಸಿ, ವಿನಯನ್ ಚಾತ್ತಪ್ಪಾಡಿ ವಂದಿಸಿದರು.

0 Comments