Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಡುಹಂದಿ ತಿವಿತಕ್ಕೆ ಮಹಿಳೆ ಬಲಿ; ಮೂವರಿಗೆ ಗಾಯ

ಮಲಪ್ಪುರ : ಕಾಡುಹಂದಿಯ ದಾಳಿಗೆ 51 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಎಡವಣ್ಣದಲ್ಲಿ ನಡೆದಿದೆ. ಎಡವಣ್ಣದ ಕಿಳಕ್ಕೆ ಚಾತಲ್ಲೂರಿನ ಪರಶುರಾಮನ್ ಕುನ್ನತ್ ಫಾತಿಮಾ (51) ಮೃತಪಟ್ಟವರು. ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ.

ಭಾನುವಾರ ಮುಂಜಾನೆ ಸುಮಾರು 5 ಗಂಟೆಗೆ ಘಟನೆ ನಡೆದಿದೆ. ಮುಂಜಾನೆ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ ಸ್ಥಳೀಯರ ಮೇಲೆ ಜನವಸತಿ ಪ್ರದೇಶಕ್ಕೆ ನುಗ್ಗಿದ ಕಾಡುಹಂದಿ ದಾಳಿ ನಡೆಸಿದೆ.

ಕಾಡುಹಂದಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಫಾತಿಮಾ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

 

Post a Comment

0 Comments

ಜಾಹೀರಾತು

Responsive Advertisement