Ticker

6/recent/ticker-posts

ಮೀನು ಕದ್ದ ಆರೋಪ, ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆಗೈದ ಮೂವರ ಬಂಧನ


 ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕಳವುಗೈದರೆಂಬ ಆರೋಪದಲ್ಲಿ ದಲಿತ ಮಹಿಳೆಯನ್ನ ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲ್ಪೆ ಪೊಲೀಸರು ಮೂರು ಮಂದಿಯನ್ನು ಬಂಧಿಸಿದ್ದಾರೆ. ಲಕ್ಷ್ಮಿ, ಶಿಲ್ಪ, ಸುಂದರ ಬಂಧಿತರು. ಇನ್ನೋರ್ವ ಶಂಕಿತನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ.
   ‌ವಿಜಯನಗರ‌ ಜಿಲ್ಲೆಯ ಹೂವಿನ ಹಡಗಲಿ ನಿವಾಸಿಯಾಗಿರುವ ಮಹಿಳೆ ‌ಕಳೆದ 5 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿರುವ ಮೀನು ಬುಟ್ಟಿಯಲ್ಲಿ ತುಂಬಿಸಿ ಹೊರುವ ಕೆಲಸ‌ ಮಾಡುತ್ತಿದರು. ಮಂಗಳವಾರ ಬೆಳಗ್ಗೆ 6 ಗಂಟೆಗೆ ಮೀನು‌ ಖಾಲಿ‌ ಮಾಡಿ ಒಂದು ಬುಟ್ಟಿಯಲ್ಲಿ ಸಿಗಡಿ ಮೀನು ಕೊಂಡೊಯ್ಯಿತ್ತಿದ್ದರು. ಈ ವೇಳೆ ಬಂದರಿನಲ್ಲಿದ್ದ ಆರೋಪಿಗಳು ‌ಮಹಿಳೆಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದರೆನ್ನಲಾಗಿದೆ. ಅನಂತರ ಮಹಿಳೆಯನ್ನು ಇಂದು ಮರಕ್ಕೆ ಕಟ್ಟಿ ಹಾಕಿ ಹಲ್ಲೆಗೈದರೆಂದು ದೂರಲಾಗಿತ್ತು

Post a Comment

0 Comments