Ticker

6/recent/ticker-posts

Ad Code

ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ, ಗುತ್ತಿಗೆದಾರ ಮೃತ್ಯು


 ಮಂಗಳೂರು: ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಗುತ್ತಿಗೆದಾರ ಮೃತಪಟ್ಟ ಘಟನೆ ನಡೆದಿದೆ. ದಾವಣಗೆರೆ ಬನಶಂಕರಿ  ಬಡಾವಣೆ ನಿವಾಸಿ  ಸುರೇಶ್ ಪೈ ಮೃತಪಟ್ಟ ವ್ಯಕ್ತಿ. ದಾವಣಗೆರೆ ಬಿಐಟಿ ರಸ್ತೆಯ ಈಶ್ವರ ಧ್ಯಾನ ಮಂದಿರದ ಬಳಿ ಕಾರು ಚಾಲನೆ‌ಮಾಎಉವಾಗ ಹೃದಯಾಘಾತವಾಗಿದೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಕಂಪೌಂಡ್ ಗೆ ಡಿಕ್ಕಿ ಹೊಡೆದಿದೆ. ಶಬ್ದ ಕೇಳಿ ಓಡಿ ಬಂದ ಸ್ಥಳೀಯರು ಸುರೇಶ್ ಪೈ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ತಲುಪಿಸಿದರೂ ಅವರು ಕೊನೆಯುಸಿರೆಳೆದರು. ಕೆಲಸ ಮುಗಿಸಿ ತನ್ನ ನಿವಾಸಕ್ಕೆ ತೆರಳುತ್ತಿರುವ ವೇಳೆ ಈ ಘಟನೆ ಸಂಭವಿಸಿದ್ದು ಪೊಲೀಸರು ಕೇಸು ದಾಖಲಿಸಿದರು

Post a Comment

0 Comments