Ticker

6/recent/ticker-posts

ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಶು ಸೌಹಾರ್ದತೆ, ವಿದ್ಯಾನಗರ ಪೊಲೀಸ್ ಠಾಣೆಯ ಚಟುವಟಿಕೆಗಳಿಗೆ ಮನ್ನಣೆ, ನೇತೃತ್ವ ವಹಿಸಿದ ಅಧಿಕಾರಿಗಳಿಗೆ ಸನ್ಮಾನ


 ಕಾಸರಗೋಡು: ಕಳೆದ ವರ್ಷ ಜಿಲ್ಲೆಯಲ್ಲಿ ಉತ್ತಮ ಶಿಶು ಸೌಹಾರ್ದ ಚಟುವಟಿಕೆ ನಡೆಸಿದ  ಪೊಲೀಸ್ ಠಾಣೆಯೆಂಬ ಹೆಗ್ಗಳಿಕೆ ವಿದ್ಯಾನಗರ ಪೊಲೀಸ್ ಠಾಣೆಗೆ ಲಭಿಸಿದೆ. ಶಿಶು ಸೌಹಾರ್ದ ಪೊಲೀಸ್ ಅಧಿಕಾರಿಗಳಾಗಿ  ಸಬ್ ಇನ್ಸ್ಪೆಕ್ಟರ್ ವಿಜಯನ್ ಮೇಲತ್, (ವಿದ್ಯಾನಗರ),  ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್  ಶೈಲಜ(ಬೇಕಲ) ಎಂಬಿವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡರದ ಕಾರ್ಯಕ್ರಮದಲ್ಲಿ ಅಡಿಶನಲ್ ‌ಪೊಲೀಸ್ ಸುಪರಿಡೆಂಟ್ ಪಿ.ಬಾಲಕೃಷ್ಣನ್ ನಾಯರ್ ಇಬ್ಬರನ್ನೂ ಸನ್ಮಾನಿಸಿದರು. ವಿದ್ಯಾನಗರ ಠಾಣಾ ವ್ಯಾಪ್ತಿಯ ದೀನ ದಯಾಳ್ ಬಡ್ಸ್ ಸ್ಕೂಲ್, ಪ್ರಗತಿ ಸ್ಪೆಶಲ್ ಸ್ಕೂಲ್, ಆಶ್ರೀ ಸ್ಪೆಶಲ್ ಸ್ಕೂಲ್, ವಿದ್ಯಾನಗರ ಕುರುಡರ ಶಾಲೆ, ಚೆರ್ಕಳ ಮಾರ್ಥೋಮ ಶಾಲೆಗಳಲ್ಲಿನ ವಿಕಲಚೇತನ ಮಕ್ಕಳಿಗಾಗಿ ನಡೆಸಿದ ಚಟುವಟಿಕೆಗಳು ವಿಜಯನ್ ಅವರ ಆಯ್ಕೆಗೆ ಕಾರಣವಾಯಿತು. ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉತ್ತಮ ರೀತಿಯಲ್ಲಿ  ಶಿಶು ಸೌಹಾರ್ದ ಚಟುವಟಿಕೆ ನಡೆಸಿದ ಶೈಲಜ ಅವರನ್ನು ಸಹ ಆಯ್ಕೆ ಮಾಡಲಾಯಿತು

Post a Comment

0 Comments