Ticker

6/recent/ticker-posts

ಅಧ್ಯಾಪಕನ ಚಿಕಿತ್ಸೆಗೆ ಸ್ಪಂದಿಸಿದ ಸಮಾಜ, ಗುರಿ ತಲುಪಿದ ಭಾರೀ‌ ಮೊತ್ತದ ನಿಧಿ ಸಂಗ್ರಹ ಕಾರ್ಯ


 ಬದಿಯಡ್ಕ : ಮುಂಡಿತ್ತಡ್ಕ ಶಾಲಾ ಹಿಂದಿ ಶಿಕ್ಷಕ ಪ್ರಶಾಂತ್ ರೈ ಪಿಲಾಂಕಟ್ಟೆ ಮಾರಕ ರೋಗಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಸಹಾಯ ಹಸ್ತ ಚಾಚಿದ್ದು  ಇದಕ್ಕೆ ಸಹಾಯಕವಾಗಿ ಇಡೀ ಸಮಾಜವೇ ಸ್ಪಂದಿಸಿದೆ. ಪ್ರಶಾಂತ್ ಮಾಸ್ತರ್ ಅವರ ಚಿಕಿತ್ಸೆಗೆ ಬೇಕಾದ 75 ಲಕ್ಷ ರೂಗಳ ಭಾರೀ ಮೊತ್ತವನ್ನು ಕೇವಲ   ದಿನಗಳೊಳ ಎಣಿಕೆಯಲ್ಲಿ  ಸಂಗ್ರಹಿಸಲಾಗಿದ್ದು ಶುಕ್ರವಾರ (ಇಂದು) ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಇನ್ನು ಮುಂದೆ ಈ ಬಗ್ಗೆ ಬಿಡುಗಡೆ ಮಾಡಿದ ವಿಡಿಯೊ, ಇತರ ಪ್ರಚಾರ ಸಾಮಾಗ್ರಿಗಳನ್ನು ಶೇರ್ ಮಾಡಬೇಕಿಲ್ಲ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಸಾಮಾಜಿಕ ಸ್ಪಂದನೆ : ಪ್ರಶಾಂತ ರೈ ಮಾಸ್ತರ್ ಗೆ ಕಳೆದ ಎರಡು ವರ್ಷಗಳ ಹಿಂದೆ ಈ ಮಾರಕ ರೋಗ ತಗಲಿದ್ದನ್ನು ಖಚಿತಪಡಿಸಿದ್ದು ಈಗಾಗಲೇ ಇವರ ಮನೆಯವರು, ಶಿಕ್ಷಕ ವೃಂದ ಮತ್ತು ಸ್ನೇಹಿತ ವರ್ಗ ಇಪ್ಪತ್ತು ಲಕ್ಷದಷ್ಡು ಹಣ ಸಂಗ್ರಹಿಸಿ ಚಿಕಿತ್ಸೆ ನೀಡಿತ್ತು. ಆದರೆ ಜೀವನ್ಮರಣ ಹೋರಾಟದಲ್ಲಿದ್ದ ಇವರ ಉನ್ನತ ಚಿಕಿತ್ಸೆಗೆ ಸುಮಾರು 75 ಲಕ್ಷ ರೂಗಳ ಆರ್ಥಿಕ ಕ್ರೋಢಿಕರಣ ಅಗತ್ಯವಾಗಿದ್ದು ಈ ಬಗ್ಗೆ ಇವರ ಹಿತೈಷಿಗಳು ಸಮಾಜ ಸೇವಕ ಫಯಾಸ್ ಮಾಡೂರು ಅವರ ತಂಡವನ್ನು ಸಂಪರ್ಕಿಸಿತ್ತು. ಈ ಭಾರೀ ಮೊತ್ತ ಸಂಗ್ರಹಣಾ ಕಾರ್ಯವನ್ನು ಒಂದು ಸವಾಲಾಗಿ ಸ್ವೀಕರಿಸಿದ ಫಯಾಸ್ ತಂಡ ಅವರ ಬಗ್ಗೆ ಹೃದಯಸ್ಪರ್ಶಿ ವಿಡಿಯೋ ಚಿತ್ರೀಕರಣ  ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಇದರ ಪ್ರಥಮ ಹಂತದಲ್ಲಿಯೇ ಸಮಾಜದ ವಿವಿಧ ಸ್ತರಗಳಿಂದ  ಸಾಕಷ್ಟು ನೆರವು ಹರಿದು ಬಂದಿತ್ತದರೂ ಉದ್ದೇಶಿತ  ಹಣ ಸಂಗ್ರಹಣೆ ನಿಧಾನಗತಿಯಲ್ಲಿ ಮುಂದುವರಿಯುತ್ತಿದ್ದು. ಈ ಸಮಯದಲ್ಲಿ ಛಲ ಬಿಡದ ಪ್ರಯತ್ನ ನಡೆಸಿದ ತಂಡ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ವಿನಂತಿಸಿತ್ತು. ಇದರಂತೆ ವಿವಿಧ ಸಮುದಾಯ ಸಂಘಗಳು, ಶಿಕ್ಷಕ ವೃಂದ,ಆಸೋಶಿಯೇಶನ್, ಸಂಘಟನೆಗಳು, ಹಲವು ಶಾಲಾ ಆಡಳಿತ ಮಂಡಳಿ,ಶಿಕ್ಷಕ ರಕ್ಷಕ ಸಂಘ,ಬಸ್ಸು ರಿಕ್ಷಾ ಚಾಲಕರ ಸಹಿತ ಜನ ಸಾಮಾನ್ಯರು, ವಿದೇಶಿ ಉದ್ಯೋಗಿಗಳು ತಮ್ಮ ಕೈಲಾದ ಕೊಡುಗೆಯನ್ನು ಆರ್ಥಿಕ ರೂಪದಲ್ಲಿ ನೀಡುವ ಮೂಲಕ ಸ್ಪಂದಿಸಿದ್ದರು

ಕರುಣೆಯ ಕಡಲಾದ ಕಾರುಣ್ಯ ಯಾತ್ರೆ : ಮುಂಡಿತ್ತಡ್ಕದ ಸಂಗಮ್ ಬಸ್ ಒಂದು ದಿನದ ಸಂಚಾರವನ್ನು ಕಾರುಣ್ಯ ಯಾತ್ರೆ ಎಂಬುದಾಗಿ ನಡೆಸಿ  ಜನಪರವಾಗಿ ಸಿಕ್ಕಿದ ಹಣವನ್ನು ಸಂಗ್ರಹಿಸಿ ಚಿಕಿತ್ಸೆಗೆ ನೀಡಿದೆ. ಬದಿಯಡ್ಕದ ಸೀನಿಯರ್ಸ್ ಆಟೋ ಚಾಲಕರು ಕಾರುಣ್ಯ ಯಾತ್ರೆ ನಡೆಸಿ‌ ಸಂಗ್ರಹವಾದ ಮೊತ್ತ ನೀಡಿದ್ದಾರೆ. ಪಳ್ಳಂ ನ ಬ್ರದರ್ಸ್ ರಿಕ್ಷಾ ಚಾಲಕರ ಸಮಿತಿ ಹಣ ಸಂಗ್ರಹಿಸಿ ನೀಡಿತ್ತು. ಹೀಗೆ ವಿವಿಧ ಸ್ತರದ ಸಂಘಟನೆಗಳು ಸಾಮಾಜಿಕ ಮುಂದಾಳುಗಳು ಸಮರೋಪಾದಿಯಾಗಿ ಸಹಕರಿಸಿದ ಕಾರಣ ಭಾರೀ ಮೊತ್ತವನ್ನು ಸಂಗ್ರಹಿಸಲಾಗಿದ್ದು. ಇವರ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. 

ಈಗಾಗಲೇ ವಿವಿದೆಡೆ ಸಂಗ್ರಹಿಸಿದ ಹಣವನ್ನು ಒಟ್ಟುಗೂಡಿಸುವ ಕೆಲಸ ನಡೆಯುತ್ತಿದ್ದು ಶೀಘ್ರವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ಕ್ರಮ ಕೈಗೊಳ್ಳಲಾಗುತ್ತಿದ್ದು ಸಹಕರಿಸಿದ ಸಹೃದಯರಿಗೆ ಕೃತಜ್ಞತೆ ಸೂಚಿಲಾಗಿದೆ.

Post a Comment

0 Comments