Ticker

6/recent/ticker-posts

ಪಕ್ಷ ತೊರೆದು ಬಿಜೆಪಿ ಸೇರಿದ ವ್ಯಕ್ತಿಯನ್ನು ಕೊಲೆಗೈದ ಪ್ರಕರಣ, ಎಂಟು ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ


 ಪಕ್ಷ ತೊರೆದು ಬಿಜೆಪಿಗೆ ಸೇರಿದ ವ್ಯಕ್ತಿಯನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ  ಎಂಟು  ಮಂದಿ ಸಿಪಿಎಂ ಕಾರ್ಯಕರ್ತರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಓರ್ವನಿಗೆ 3 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಲಾಗಿದೆ.   ತಲಶೇರಿ ಮುಯಪ್ಪಿಲಂಗಾಡ್ ನಿವಾಸಿ ಸೂರಜ್(32) ಕೊಲೆಗೈಯ್ಯಲ್ಪಟ್ಟ ಬಿಜೆಪಿ ಕಾರ್ಯಕರ್ತ. 2005 ಅಗೋಸ್ಟ್ 7 ರಂದು ಬೆಳಗ್ಗೆ 8.40 ಕ್ಕೆ ಆಟೋದಲ್ಲಿ ಬಂದಿಳಿದ ಸಿಪಿಎಂ ಕಾರ್ಯಕರ್ತರ ತಂಡ ಸೂರಜ್ ಇರಿದು ಕೊಲೆಗೈದಿತ್ತು. ಈ ಘಟನೆಗೆ ಆರು ತಿಂಗಳು ಮೊದಲು ಸಿಪಿಎಂ ಕಾರ್ಯಕರ್ತರು ಸೂರಜ್‌ನನ್ನು ಮಾರಣಾಂತಿಕವಾಗಿ ಹಲ್ಲೆಗೈದು ಗಾಯಗೊಳಿಸಿದ್ದರು. ಸಿಪಿಎಂ ಸಕ್ರಿಯ ಕಾರ್ಯಕರ್ತರಾಗಿದ್ದ ಸೂರಜ್, ಪಕ್ಷ ತೊರೆದು ಬಿಜೆಪಿ ಸೇರಿದುದೇ ಕೊಲೆಗೆ ಕಾರಣವೆಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಹೇಳಿದ್ದರು. ಸಿಪಿಎಂ ಕಾರ್ಯಕರ್ತರಾದ ರಜೀಶ್, ಯೋಗೇಶ್, ಜಿತ್ತು, ಮನೋರಾಜ್, ಸಜೀವನ್, ಪ್ರಭಾಕರನ್,  ಪದ್ಮನಾಭನ್, ಪ್ರದೀಪನ್, ರಾಧಾಕೃಷ್ಣನ್ ಎಂಬಿವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಒಂದನೇ ಆರೋಪಿಯನ್ನು ಅಡಗಲು ಸಹಾಯ ಮಾಡಿದ ಪ್ರಕರಣದಲ್ಲಿ 13 ನೇ ಆರೋಪಿಗೆ 3 ವರ್ಷಗಳ ಶಿಕ್ಷೆ ವಿಧಿಸಲಾಯಿತು.   ಈ ಪ್ರಕರಣದಲ್ಲಿ ಒಟ್ಟು 12 ಆರೋಪಿಗಳಿದ್ದು ಇಬ್ಬರು ವಿಚಾರಣೆ ವೇಳೆ ಮೃತಪಟ್ಟಿದ್ದರು.  ಉಳಿದ 10 ಮಂದಿ ಆರೋಪಿಗಳಲ್ಲಿ ಓರ್ವನನ್ನು ಖುಲಾಸೆಗೊಳಿಸಲಾಗಿತ್ತು

Post a Comment

0 Comments