ಬದಿಯಡ್ಕ : ಮುಂಡಿತ್ತಡ್ಕ ಶಾಲಾ ಹಿಂದಿ ಶಿಕ್ಷಕ ಪ್ರಶಾಂತ್ ರೈ ಪಿಲಾಂಕಟ್ಟೆ ಮಾರಕ ರೋಗಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಸಹಾಯ ಹಸ್ತ ಚಾಚಿದ್ದು ಇದಕ್ಕೆ ಸಹಾಯಕವಾಗಿ ಬದಿಯಡ್ಕದ ಬಸ್ಸು ನಿಲ್ದಾಣ ಬಳಿಯ ಸಿನ್ಸಿಯರ್ ಆಟೋ ಚಾಲಕರ ಸಂಘವು ಇಂದು ಕಾರುಣ್ಯ ಯಾತ್ರೆ ನಡೆಸುತ್ತಿದೆ
ಬದಿಯಡ್ಕದ ಖ್ಯಾತ ವೈದ್ಯರಾದ ಡಾ.ಶ್ರೀನಿಧಿ ಸರಳಾಯ ಉದ್ಘಾಟಿಸಿದರು. ಗ್ರಾಮ ಪಂಚಾಯತು ಸದಸ್ಯರುಗಳಾದ ವಿ.ಬಾಲಕೃಷ್ಣ ಶೆಟ್ಟಿ, ಶ್ಯಾಮ ಪ್ರಸಾದ್ ಮಾನ್ಯ, ಹನೀದ್ ಕೆಡೆಂಜಿ, ಜಗನ್ನಾಥ ರೈ ಕೊರೆಕಾನ, ನಿರಂಜನ ರೈ ಪೆರಡಾಲ, ರಾಜೇಶ್ ಮಾಸ್ತರ್ ಅಗಲ್ಪಾಡಿ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಸಿನ್ಸಿಯರ್ ಆಟೋ ಚಾಲಕ ಸಂಘ ಪ್ರತಿನಿಧಿಗಳಾದ ರಂಜನಾಥ ಶೆಟ್ಟಿ, ಕಡಾರು, ಅನಿಲ್ ಕುಮಾರ್, ಅಬ್ದುಲ್ ಕುಞ ಸೂಪಿ ಬಿ, ದಯನಾನಂದ, ಕಿಶೋರ್ ಸಹಿತ ಹಲವರು ಉಪಸ್ಥಿತರಿದ್ದರು
0 Comments