ಮಾನಸಿಕ ರೋಗಿಯಾದ ಮಗ ತಂದೆಯನ್ನೇ ಇರಿದು ಕೊಲೆಗೈದ ಘಟನೆ ನಡೆದಿದೆ. ಕೋಜಿಕ್ಕೋಡ್ ಬಾಲುಶೇರಿ ಚಾಣರ ನಿವಾಸಿ ಅಶೋಕನ್ ಕೊಲೆಗೀಡಾದ ವ್ಯಕ್ತಿ. ಇವರ ಪು್್ರ ಸುಧೀಶ್ನನನನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿ ತಂದೆ ಹಾಗೂ ಮಗ ಮಾತ್ರ ಇದ್ದರೆನ್ನಲಾಗಿದೆ. ಸೋಮವಾರ ಬೆಳಗ್ಗೆ ಯಾವುದೋ ವಿಷಯಕ್ಕೆ ಸಂಬಂಧಿಸಿ ತಂದೆ-ಮಗನ ಮಧ್ಯೆ ಜಗಳ ಉಂಟಾಗಿತ್ತು. ಅನಂತರ ಅದು ತಣ್ಣಗಾಗಿತ್ತು. ಸಾಯಂಕಾಲ ಮನೆಯಲ್ಲಿ ಬೆಳಕು ಕಾಣದ ಕಾರಣ ನೆರೆಮನೆಯವರು ಬಂದು ನೋಡಿದಾಗ ಅಶೋಕನ್ ರಕ್ತದ ಮಡುವಿನಲ್ಲಿ ಸತ್ತು ಬಿದ್ದೊರುವುದು ಕಂಡು ಬಂತು. ಈ ವೇಳೆ ಮಗ ಸುಧೀಶ್ ಪರಾರಿಯಾಗಿದ್ದನು. ಮಾಹಿತಿ ತಿಳಿದು ಆಗಮಿಸಿದ ಪೊಲೀಸರು ಸಮೀಪದಲ್ಲೇ ಅಡಗಿ ಕುಳಿತಿದ್ದ ಸುಧೀಶನನ್ನು ಬಂಧಿಸಿದ್ದಾರೆ.
ಅಶೋಕರ ಪತ್ನಿಯನ್ನು ಇನ್ನೋರ್ವ ಪುತ್ರ ಎಂಟು ವರ್ಷಗಳ ಹಿಂದೆ ಕೊಲೆಗೈದು ಅನಂತರ ಆತ್ಮಹತ್ಯೆ ಮಾಡಿದ್ದನು
0 Comments