Ticker

6/recent/ticker-posts

ಮನೆಯ ವರಾಂಡದಲ್ಲಿ‌ ಕುಸಿದು ಬಿದ್ದು ಯುವತಿ‌ ಮೃತ್ಯು


 ಮುಳ್ಳೇರಿಯ: ಮನೆಯ ವರಾಂಡದಲ್ಲಿ‌ ಕುಸಿದು ಬಿದ್ದು ಯುವತಿ ಮೃತಪಟ್ಟ ಘಟನೆ ‌ನಡೆದಿದೆ. ಮುಳ್ಳೇರಿಯ ಶಾಂತಿನಗರ ನಿವಾಸಿ ಪೂರ್ಣಿಮಾ (34) ಮೃತಪಟ್ಟ ಯುವತಿ. ನಿನ್ನೆ  (ಆದಿತ್ಯವಾರ) ಮದ್ಯಾಹ್ನ ಮನೆಯ ವರಾಂಡದಲ್ಲಿ ವಿಶ್ರಾಂತಿಯಲ್ಲಿದ್ದಾಗ ಕುಸಿದು ಬಿದ್ದರೆನ್ನಲಾಗಿದೆ.  ಕೂಡಲೇ ಮುಳ್ಳೇರಿಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಕೊನೆಯುಸಿರೆಳೆದಿದ್ದಾರೆ.  ಇವರು ಶಾಂತಿನಗರದ ದಿವಂಗತ ಕೋರನ್ ಮಾಧವನ್ ನಾಯರರ ಪುತ್ರಿಯಾಗಿದ್ದಾರೆ.‌ಮೃತರು ತಾಯಿ ಸರೋಜಿನಿ,  ಪತಿ ಚಂದ್ರನ್, ಪುತ್ರ ಸಾಯಂತ್ ಕೃಷ್ಣ, ಸಹೋದರ ಸಹೋದರಿಯರಾದ ವಿನೋದ್ ಕುಮಾರ್, ಪುಷ್ಪಲತ, ಮಣಿಕಂಠನ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments