ಕಾಸರಗೋಡು: ಕಾಞಂಗಾಡ್- ಕಾಸರಗೋಡು ಕೆ.ಎಸ್.ಟಿ.ಪಿ.ರಸ್ತೆಯ ಕಳನಾಡು ಬಸ್ಸು ಸ್ಟಾಪ್ ಬಳಿ ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ನಡೆದಿದೆ. ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ.
ತ್ರಿಕ್ಕನ್ನಾಡ್ ಮಲಾಂಕುನ್ನು ಅಶೋಕ್ ಎಂಬವರ ಪುತ್ರ ಎ.ಅನಂತು(26) ಮೃತಪಟ್ಟವರು. ಅನಂತುವಿನ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಶ್ವಿನ್(25), ಪ್ರಣವ್(26), ಸೌರವ್(25), ಅಕ್ಷಯ್(26) ಎಂಬಿವರು ಗಾಯಗೊಂಡವರು.ಇವರನ್ನುವಿವಿದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ಚಲನಚಿತ್ರ ನೋಡಿ ಹಿಂತಿರುಗುತ್ತಿದ್ದ ಅನಂತು ಹಾಗೂ ಗೆಳೆಯರು ಪ್ರಯಾಣಿಸುತ್ತಿದ್ದ ಆಲ್ಟೋ ಕಾರು ಹಾಗೂ ಕಾಸರಗೋಡು ಭಾಗಕ್ಕೆ ಬರುತ್ತಿದ್ದ ಇನ್ನೋವಾ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ. ಮೇಲ್ಪರಂಬ ಪೊಲೀಸರು ತನಿಖೆ ಆರಂಭಿಸಿದ್ದಾರೆ
0 Comments