Ticker

6/recent/ticker-posts

ನೀರ್ಚಾಲು ಬಳಿ‌ ಲೈಫ್ ವಸತಿ ಯೋಜನೆಯಲ್ಲಿ ಲಭಿಸಿದ ಮನೆ ಬಾಡಿಗೆಗೆ ಪಡೆದು ಎಂಡಿಎಂಎ ಮಾರಾಟ, ಇಬ್ಬರ ಸೆರೆ.


 ಬದಿಯಡ್ಕ: ವ್ಯಕ್ತಿಯೋರ್ವರಿಗೆ ಲೈಫ್ ವಸತಿ ಯೋಜನೆಯಂತೆ ಲಭಿಸಿದ ಮನೆಯನ್ನು ಬಾಡಿಗೆಗೆ ಪಡೆದು  ಮಾದಕವಸ್ತು ಮಾರಾಟ ಮಾಡಿತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ನೀರ್ಚಾಲು ನಿವಾಸಿ ಮುಹಮ್ಮದ್ ಆಸೀಫ್(31), ಚೌಕಿ ಅಸಾಧ ನಗರ ನಿವಾಸಿ ಮುಹಮ್ಮದ್ ಇಕ್ಬಾಲ್(38) ಬಂಧಿತ ಆರೋಪಿಗಳು. ಇವರ ಕೈಯಿಂದ 25.100 ಗ್ರಾಂ ನಿಷೇಧಿತ ಎಂಡಿಎಂಎ ವಶಪಡಿಸಲಾಗಿದೆ. ನೀರ್ಚಾಲು ಬಳಿಯ ಎಣಿಯೆರ್ಪು ಎಂಬಲ್ಲಿ ಸರಕಾರಿ ಸ್ಥಳದಲ್ಲಿ ‌ನಿರ್ಮಿಸಿದ ಲೈಫ್ ವಸತಿ ಯೋಜನೆಯ ಮನೆಯನ್ನು ಆ ವ್ಯಕ್ತಿಯ ಕೈಯಿಂದ  ಬಾಡಿಗೆಗೆ ಪಡೆದು ಮಾದಕವಸ್ತು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ರಹಸ್ಯ ಮಾಹಿತಿಯಂತೆ ಬದಿಯಡ್ಕ ಇನ್ಸ್ಪೆಕ್ಟರ್ ಕೆ.ಸುಧೀರ್ ಅವರ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯ ಮಲಗುವ ಕೋಣೆಯಲ್ಲಿ ಪ್ಯಾಕೆಟ್ ಗಳಾಗಿ ಮಾಡಿ ಎಂಡಿಎಂಎ ದಾಸ್ತಾನು ಇಡಲಾಗಿತ್ತು.

Post a Comment

0 Comments