Ticker

6/recent/ticker-posts

ಬಾಕ್ರಬೈಲಿನಲ್ಲಿ ಯುವಕನ ಮೇಲೆ ಅಪರಿಚಿತರಿಂದ ಗುಂಡು ಹಾರಾಟ, ಗಂಭೀರ ಸ್ಥಿತಿಯಲ್ಲಿ‌ ಮಂಗಳೂರು ಆಸ್ಪತ್ರೆಗೆ ದಾಖಲು


 ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಕ್ರಬೈಲಿನಲ್ಲಿ ಯುವಕನ ಮೇಲೆ ಅಪರಿಚಿತರು ಗುಂಡು ಹಾರಿಸಿದ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಬಾಕ್ರಬೈಲು ನಿವಾಸಿ ಸವಾದ್(22) ನನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ (ಆದಿತ್ಯವಾರ) ರಾತ್ರಿ 10.20 ಕ್ಕೆ ಈ ಘಟನೆ ನಡೆದಿದೆ.

   ರಾತ್ರಿ ಗುಡ್ಡದ ಮೇಲೆ ಕಾಡು ತುಂಬಿದ ಸ್ಥಳದಲ್ಲಿ ಬೆಳಕು ಕಂಡುಬಂದ ಹಿನ್ನೆಲೆಯಲ್ಲಿ ಯಾರಿರಬಹುದು ಎಂದು ತಿಳಿಯಲು ಸವಾದ್ ಹಾಗೂ ಗೆಳೆಯರು ಗುಡ್ಡ ಹತ್ತಿದ್ದಾರೆ ಎನ್ನಲಾಗಿದೆ. ಬೆಳಕು ಇರುವ ಸ್ಥಳ ಸಮೀಪಿಸಿದಾಗ ಕಾಲಿಗೆ ಗುಂಡು ತಗಲಿದೆಯೆಂದು ಸವಾದ್ ಹೇಳಿದ್ದಾರೆ. ಯಾರು ಗುಂಡು ಹೊಡೆದರೆಂಬ ಮಾಹಿತಿಯಿಲ್ಲ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 

Post a Comment

0 Comments