Ticker

6/recent/ticker-posts

ಅಮಿತವಾದ ಗಾಳಿ, ಮಳೆ; ಆನೆ ಚಪ್ಫರಕ್ಕೆ ಬಾಗಿ ನಿಂತ ತ್ರಿಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ಕ್ಷೇತ್ರದ ದ್ವಜಸ್ಥಂಭ,


 ಕಾಸರಗೋಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ತ್ರಿಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ಕ್ಷೇತ್ರದ ದ್ವಜಸ್ಥಂಭ ಬಾಗಿ ನಿಂತಿದೆ. ಇಂದು (ಗುರುವಾರ) ಬೆಳಗ್ಗೆ ದ್ವಜಸ್ಥಂಭವು ಆನೆ ಚಪ್ಪರಕ್ಕೆ ಬಾಗಿ ನಿಂತಿರುವುದು ಕಂಡು ಬಂದಿದೆ. ದ್ವಜಸ್ಥಂಭಕ್ಕೆ ಸಂಪೂರ್ಣವಾಗಿ ಹಿತ್ತಾಳೆಯ ಲೇಪವಿದೆ. ದ್ವಜಸ್ಥಂಭದ ಅಡಿ ಭಾಗ ಎದ್ದು‌ ಮೇಲಕ್ಕದ ಬಂದ ಸ್ಥಿತಿಯಲ್ಲಿದೆ. ಇಂದು ಬೆಳಗ್ಗೆ ಈ ಪ್ರದೇಶದಲ್ಲಿ ವ್ಯಾಪಕ ಗಾಳಿ ಬೀಸಿತ್ತು. ದ್ವಜಸ್ಥಂಭ ಬಾಗಲು ಇದು ಕಾರಣವೆನ್ನಲಾಗಿದೆ. ಮಾಹಿತಿ ತಿಳಿದು ಕ್ಷೇತ್ರ ಪದಾಧಿಕಾರಿಗಳು, ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೇಕಲ ಪೊಲೀಸರು, ದೇವಸ್ವಂ ಅಧಿಕಾರಿಗಳೂ ಆಗಮಿಸಿದ್ದಾರೆ.

Post a Comment

0 Comments