Ticker

6/recent/ticker-posts

ಬಿಜೆಪಿ ಕುಂಬಳೆ ಸಮಿತಿಯ ಆಶ್ರಯದಲ್ಲಿ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ


 ಬಿಜೆಪಿ ಕುಂಬಳೆ ಉತ್ತರ ವಲಯದ ಸಮಿತಿಯ ವತಿಯಿಂದ ಕಿದೂರು  ಕುಂಟಗೇರಡ್ಕ ಕಾಲೋನಿಯ ನಮ್ಮ ಪಕ್ಷದ ಕಾರ್ಯಕರ್ತರಾದ  ಶ್ರೀ ಶಿವನಾಥ ( ಜ್ಯೋತಿ ) ಯವರ   ಮನೆಯಲ್ಲಿ ಡಾ! ಬಿ ಆರ್ ಅಂಬೇಡ್ಕರ್  ಜಯಂತಿ   ಪುಷ್ಪಾರ್ಚನೆಯ  ಮೂಲಕ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರ ವಲಯದ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ರೈ ಮಡ್ವ ವಹಿಸಿದರು. ಉದ್ಘಾಟನೆಯನ್ನು  ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾದಂತಹ ಶ್ರೀ ಎಪಿ  ಅಬ್ದುಲ್ಲ ಕುಟ್ಟಿಯವರು ಮಾಡಿದರು. ಕುಂಬಳೆ ಮಂಡಲ ಅಧ್ಯಕ್ಷರಾದ ಸುನಿಲ್ ಅನಂತಪುರ ಹಾಗೂ   ರಾಜ್ಯ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ  ಮಾತನಾಡಿದರು. ಮಂಡಲ ಖಜಾಂಜಿ ರಾಧಾಕೃಷ್ಣ ರೈಮಡ್ವ,  ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕಿದೂರು ಭಾಗವಹಿಸಿದರು.  ಒ ಬಿ ಸಿ ಮೋರ್ಚಾ ಮಂಡಲ ಅಧ್ಯಕ್ಷರು ಮಹೇಶ್ ಪುಣಿಯೂರುರವರು   ಸ್ವಾಗತಿಸಿ., ಪ್ರದೀಪ್ ಕುಮಾರ್ ಆರಿಕ್ಕಾಡಿ  ಧನ್ಯವಾದವಿತ್ತರು. ಹಾಗೂ ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕರ್ತರು ಭಾಗಿಯಾದರು.

Post a Comment

0 Comments