ವಿದ್ಯಾರ್ಥಿನಿಯನ್ನು ಕೊಲೆಗೈದು ಮೃತದೇಹವನ್ನು ಹೊಳೆಗೆಸೆದ ಪ್ರಕರಣದಲ್ಲಿ 15 ವರ್ಷಗಳ ನಂತರ ಆರೋಪಿಯನ್ನು ಬಂಧಿಸಲಾಗಿದ್ದಾರೆ. ರಾಜಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಎಣ್ಣಪ್ಪಾರ ನಿವಾಸು ಎಂ.ಸಿ.ರೇಶ್ಮ(17/2010) ನಾಪತ್ತೆಯಾದ ಪ್ರಕರಣದಲ್ಲಿ ಆಕೆಯನ್ನು ಕೊಲೆಗೈದು ಮೃತದೇಹವನ್ನು ಹೊಳೆಗೆಸೆದ ಆರೋಪಿ ಪಾಣತ್ತೂರು ನಿವಾಸಿ ಬಿಜು ಫೌಲೋಸ್‌ನನ್ನು ಕ್ರೈಂಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದಾರೆ. ಮಡಿಕೇರಿಯಿಂದ ಈತನ ಬಂಧನ ನಡೆದಿದೆ.
ಟಿ.ಟಿ.ಸಿ.ಓದುತ್ತಿದ್ದ ರೇಶ್ಮಾ 2010 ಜೂನ್ 6 ರಂದು ನಾಪತ್ತೆಯಾಗಿದ್ದಳು. ಈ ಬಗ್ಗೆ ತಂದೆ ರಾಮನ್ ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸಿದರೂ ಯಾವುದೇ ಪ್ರಗತಿ ಉಂಟಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಂದೆ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ರೇಶ್ಮಾ ನಾಪತ್ತೆ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್ ಗೆ ವಹಿಸಿತು. ಕ್ರೈಂಬ್ರಾಂಚ್ ಅಧಿಕಾರಿಗಳು ಶಂಕಿತ ಆರೋಪಿ ಬಿಜು ಫೌಲೋಸ್ ನನ್ನು ವಿಚಾರಣೆ ನಡೆಸಿದಾಗ ತಾನು ರೇಶ್ಮಾಳನ್ನು ಕೊಲೆಗೈದು ಮೃತದೇಹವನ್ನು ಹೊಳೆಯಲ್ಲಿ ತೇಲಿಬಿಟ್ಟೆನೆಂದು ಒಪ್ಪಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಹೊಳೆಯಲ್ಲಿ ಹುಡುಕಾಡಿದಾಗ ನಾಪತ್ತೆಯಾದ ರೇಶ್ಮಳ ಎಲುಬು ಲಭಿಸಿತು. ಡಿ.ಎನ್.ಎ.ಪರೀಕ್ಷೆ ನಡೆಸಿದಾಗ ಎಲುಬು ರೇಶ್ಮಳದ್ದು ಎಂದು ತಿಳಿಯಿತು. ಈ ಹಿನ್ನೆಲೆಯಲ್ಲಿ ಆರೋಪಿಯ ಬಂಧನ ನಡೆದಿದೆ
0 Comments