Ticker

6/recent/ticker-posts

Ad Code

ಮುಖಾರಿಗದ್ದೆಯಲ್ಲಿ ಹೊತ್ತಿ ಉರಿದ ಹಾರ್ಡ್ ವೇರ್ ಅಂಗಡಿ, ಬೆಂಕಿ‌ ನಂದಿಸಲು ಹರಸಾಹಸ


 ಸೀತಾಂಗೋಳಿ: ಸೀತಾಂಗೋಳಿ- ಪೆರ್ಲ ರಸ್ತೆಯ ಮುಖಾರಿಗದ್ದೆಯಲ್ಲಿ ಹಾರ್ಡ್ ವೇರ್ ಅಂಗಡಿ ಬೆಂಕಿ ಅಕಸ್ಮಿಕದಿಂದಾಗಿ ಹೊತ್ತಿ ಉರಿದಿದೆ. 



ಕುಂಬ್ಡಾಜೆ ತೋನಿಕರ ನಿವಾಸಿ‌ ಹರ್ಷಾದ್ ಎಂಬವರ ಅರಸ್ ಎಂಟರ್ಪ್ರೈಸ್ ಎಂಬ ಹಾರ್ಡ್ ವೇರ್ ಅಂಗಡಿ  ಇಂದು (ಶನಿವಾರ) ಬೆಳಗ್ಗೆ ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಿ ಉರಿಯಲು ಕಾರಣವೆಂದು ಹೇಳಲಾಗುತ್ತಿದೆ. 



ಉಪ್ಪಳ, ಕಾಸರಗೋಡು ಎಂಬೆಡೆಗಳಿಂದ ಅಗ್ನಿಶಾಮಕ ದಳ ಸಿಬಂದಿಗಳು ಆಗಮಿಸಿ ಊರವರ ಸಹಾಯದೊಂದಿಗೆ ಬೆಂಕಿ ನಂದಿಸುತ್ತಿದ್ದಾರೆ. ಕುಂಬಳೆ ಇನ್ಸ್ಪೆಕ್ಟರ್ ಕೆ.ಪಿ.ವಿನೋದ್ ಕುಮಾರ್ ಹಾಗೂ ಸಿಬಂದಿಗಳು ಸಹ ಆಗಮಿಸಿದ್ದಾರೆ.



 ಒಂದು ಕೋಟಿ ರೂ ಅಧಿಕ ನಷ್ಟ ಅಂದಾಜಿಸಲಾಗಿದೆ.

Post a Comment

0 Comments