Ticker

6/recent/ticker-posts

Ad Code

ಮೇ 18ಕ್ಕೆ ಮಣಿಯಂಪಾರೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ 42ನೇ ವಾರ್ಷಿಕ ಏಕಾಹ ಭಜನೋತ್ಸವ


ಪೆರ್ಲ : ಮಣಿಯಂಪಾರೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ದುರ್ಗಾನಗರ, ಮಣಿಯಂಪಾರೆ ಇದರ 42ನೇ ವಾರ್ಷಿಕ ಏಕಾಹ ಭಜನೋತ್ಸವ  ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಮೇ 18ಕ್ಕೆ ಸೂರ್ಯೋದಯದಿಂದ ಪ್ರಾರಂಭಿಸಿ ಮರುದಿನ ಸೂರ್ಯೋದಯದ ವರೆಗೆ ಜರಗಲಿದೆ.ಇದರ ಅಂಗವಾಗಿ ಪ್ರಾತಃ ಗಂಟೆ 6.05ಕ್ಕೆ ದೀಪಾರಾಧನೆ, ಭಜನೆ ಪ್ರಾರಂಭ ಗಂಟೆ 6.05 ರಿಂದ 7ರ ತನಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ, ಮಣಿಯಂಪಾರೆ,7 ರಿಂದ 8.15 ತನಕ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ, ದೇಲಂಪಾಡಿ, 8.15 ರಿಂದ 9.45 ರ ತನಕ  ಶ್ರೀ ಮಹಮ್ಮಾಯಿ ಭಜನಾ ಸಂಘ, ಬಲ್ತಕಲ್ಲು-ಬೆದ್ರಂಪಳ್ಳ9.45 ರಿಂದ 10.45 ರ ತನಕ  ಸ್ಥಳೀಯ ಮಕ್ಕಳಿಂದ,10.45 ರಿಂದ ಶ್ರೀ ಗಣೇಶ ಮಹಿಳಾ ಭಜನಾ ಸಂಘ, ಬೆದ್ರಂಪಳ್ಳ, ಮಧ್ಯಾಹ್ನ 12.00 ರಿಂದ ಶ್ರೀ ಜಟಾಧಾರೀ ಧೂಮಾವತಿ ದೈವಸ್ಥಾನ, ಸಂಟನಡ್ಕ,1.15 ರಿಂದ ಶ್ರೀ ಶಾರದಾ ಭಜನಾ ಸಂಘ, ಬೇಂಗಪದವು,2.30 ರಿಂದ ಶ್ರೀ ಸಿದ್ಧಿವಿನಾಯಕ ಭಜನಾ ಸಮಿತಿ, ವಿನಾಯಕ ನಗರ-ಗೋಳಿತ್ತಾರು,3.45 ರಿಂದ ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಭಜನಾ ಸಂಘ, ಮಣಿಯಂಪಾರೆ,ಸಂಜೆ ಗಂಟೆ 5.00 ರಿಂದ ಶ್ರೀದೇವಿ ಭಜನಾ ಸಂಘ, ದಳ-ಕಲ್ಲಡ್ಕ,6.15 ರಿಂದ ಶ್ರೀ ಸತ್ಯನಾರಾಯಣ ಭಜನಾ ಸಂಘ, ಪೆರ್ಲ,ರಾತ್ರಿ 7.30 ರಿಂದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಶೇಣಿ (ಉಲ್ಲೆಯೊಂದಿಗೆ),8.45 ರಿಂದ ಶ್ರೀ ಗಣೇಶ ಭಜನಾ ಮಂಡಳಿ, ಬೆದ್ರಂಪಳ್ಳ (ಉಲ್ಲೆಯೊಂದಿಗೆ) ,10.15 ರಿಂದ 11.30 : ಶ್ರೀ ದುರ್ಗಾಪರಮೇಶ್ವರೀ ಕುಣಿತ ಭಜನಾ ಸಂಘ, ಮಣಿಯಂಪಾರೆ (ಕುಣಿತ ಭಜನೆ),11.30 ರಿಂದ ಶ್ರೀ ಸುಬ್ರಹ್ಮಣೇಶ್ವರ ಭಜನಾ ಮಂಡಳಿ, ಕಾಟುಕುಕ್ಕೆ,1.00 ರಿಂದ ಶ್ರೀ ಮಹಾವಿಷ್ಣು ಭಜನಾ ಸಂಘ, ಮುಂಡಿತ್ತಡ್ಕ, 2.15 ರಿಂದ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ, ಬಜಕೂಡ್ಲು, 3.30 ರಿಂದ 4.45 : ಶ್ರೀಕೃಷ್ಣ ಭಜನಾ ಸಂಘ,ಬಾಡೂರುಪದವು, ಪ್ರಾತಃಕಾಲ 4.45 ರಿಂದ ಸಾಮೂಹಿಕ ಭಜನೆ, ಮಹಾಮಂಗಳಾರತಿಯೊಂದಿಗೆ ಏಕಾಹ ಭಜನೆ ಸಂಪನ್ನಗೊಳ್ಳಲಿದೆ.

Post a Comment

0 Comments