Ticker

6/recent/ticker-posts

Ad Code

ಮೇ 19 ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಶಬರಿಮಲೆಗೆ ಬೇಟಿ


 ತಿರುವನಂತಪುರಂ: ಶಬರಿಮಲೆ ದರರ್ಶನಕ್ಕಾಗಿ ರಾಷ್ಟ್ರಪತಿ ದ್ರೌಪತಿ ಮುರ್ಮು ಈ ವಾರವೇ ಕೇರಳಕ್ಕೆ ಆಗಮಿಸುವರು. ಈ ತಿಂಗಳ 18 ರಂದು ಕೊಟ್ಟಯಂ ತಲುಪುವ ಅವರು 19 ರಂದು ಶಬರಿಮಲೆಗೆ ಬೇಟಿ ನೀಡುವರು ಎಂದು ಈ ಹಿಂದೆ ವರದಿ ಬಂದಿತ್ತು. ಈ ಮಧ್ಯೆ ಭಾರತ- ಪಾಕಿಸ್ತಾನ ಯುದ್ದದ ಹಿನ್ನೆಲೆಯಲ್ಲಿ ರಾಷ್ಡ್ರಪತಿಯವರ ಕೇರಳ ಸಂದರ್ಶನ ಮುಂದೂಡಬಹುದೇ ಎಂಬ ಶಂಕೆ ಉಂಟಾಗಿತ್ತು. ಇದೀಗ ಪೂರ್ವ ನಿಶ್ಷಯದಂತೆ 18 ರಂದು ಕೇರಳಕ್ಕೆ ಆಗಮಿಸುವ ಅವರು 19 ರಂದು ಶಬರಿಮಲೆಗೆ ಬೇಟಿ ನೀಡುವರು. ರಾಷ್ಟ್ರಪತಿಯವರ ಕೇರಳ ಬೇಟಿಯ ಸಮಯಕ್ರಮ ವರದಿಯನ್ನು ಇಂದು (ಮಂಗಳವಾರ) ಕೇಂದ್ರ ಗೃಹಖಾತೆ ರಾಜ್ಯ ಸರಕಾರಕ್ಕೆ ಹಸ್ತಾಂತರಿಸುವರು.  ಕುಮರಗಂನಲ್ಲಿ ತಂಗುವ ರಾಷ್ಟ್ರಪತಿ, ಪಾಲಾ ಸೈಂಟ್ ಥೋಮಸ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾಷ್ಟ್ರಪತಿಯವರ ಬೇಟಿಯ ಹಿನ್ನೆಲೆಯಲ್ಲಿ ಶಬರಿಮಲೆ ಸಹಿತ ವಿವಿದೆಡೆ ರಸ್ತೆಗಳ ದುರಸ್ತಿ ‌ನಡೆಯುತ್ತಿದೆಯೆಂದು ತಿಳಿದುಬಂದಿದೆ

Post a Comment

0 Comments