Ticker

6/recent/ticker-posts

82 ಸಂವತ್ಸರಗಳನ್ನು‌ ಪೂರೈಸಿದ ಕಜಂಪಾಡಿ ಸುಬ್ರಮಣ್ಯ ಭಟ್, ಇಡಿಯಡ್ಕ ಕ್ಷೇತ್ರದಲ್ಲಿ ವಿವಿದ ಕಾರ್ಯಕ್ರಮಗಳು


ಪೆರ್ಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ  ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯರಾದ‌ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು 82 ಸಂವತ್ಸರಗಳನ್ನು ಪೂರೈಸಿದ ಪ್ರಯುಕ್ತ ಲೋಕ‌ಕಲ್ಯಾಣಾರ್ಥಕ್ಕಾಗಿ  ರಾಷ್ಟ್ರ ವಿಜಯ ಯಜ್ಞ ಹಾಗೂ ಪವಮಾನ ಹೋಮ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ ,(ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನ ಸಭಾಂಗಣದಲ್ಲಿ ಜರಗಿತು. 

ಮತ್ತೂರು ವೇದಮೂರ್ತಿ ಶ್ರೀ ಚೆನ್ನಕೇಶವ ದೀಕ್ಷಿತರು ರಾಷ್ಟ್ರ ವಿಜಯ ಯಜ್ಞಕ್ಕೆ ನೇತೃತ್ವ ‌ನೀಡಿದರು. ಸಜಂಗದ್ದೆ  ವೇದಮೂರ್ತಿ ಶ್ರೀ ಶ್ರೀಧರ ಭಟ್ ಅವರ ನೇತೃತ್ವದಲ್ಲಿ ಪವಮಾನ ಹೋಮ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ  ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹಾಗೂ  ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್  ಮಂಗೇಶ್ ಭೇಂಡೆ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದರು. ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಭಯ್ಯಾಜಿ ಸುರೇಶ್ ಜಿ ಜೋಷಿ, ಉತ್ತರ ಕೇರಳ ಪ್ರಾಂತ ಸಂಘಚಾಲಕ ಅಡ್ವ.ಕೆ.ಕೆ.ಬಲರಾಂ,  ವೇದಮೂರ್ತಿ ಚೆನ್ನಕೇಶವ ದೀಕ್ಷಿತ್, ವೆಧಮೂರ್ತಿ ಶ್ರೀಧರ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್ ದಂಪತಿಗಳು ಭಾಗವಹಿಸಿದರು. ಕೊನೆಯಲ್ಲಿ ಸಂಘಪ್ರಾರ್ಥನೆ ನಡೆದಿತು.
ಅನಂತರ ಯಜ್ಞಗಳ ಪೂರ್ಣಾಹುತಿ, ಮಹಾಪೂಜೆ, ಮಂತ್ರಾಕ್ಷತೆ, ಭೋಜನ ನಡೆಯಿತು. ಸಂಘ ಪರಿವಾರದ ಮುಖಂಡರುಗಳು, ಜನಪ್ರತಿನಿಧಿಗಳು, ಅಭಿಮಾನಿ ಬಳಗ ಸಹಿತ ನೂರಾರು ಮಂದಿ ಭಾಗವಹಿಸಿದರು.

Post a Comment

0 Comments