Ticker

6/recent/ticker-posts

Ad Code

ವಿಯಿಞಂ ಅಂತರಾಷ್ಟ್ರೀಯ ಬಂದರು ಉದ್ಘಾಟನೆ, ಇಂದು ಕೇರಳಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ


 ತಿರುವನಂತಪುರಂ: ವಿಯಿಞಂ ಅಂತರಾಷ್ಟ್ರೀಯ ಬಂದರು ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇಂದು (ಗುರುವಾರ) ರಾಜ್ಯಕ್ಕೆ ಆಗಮಿಸುವರು. ಇಂದು ಸಾಯಂಕಾಲ 7.50 ಕ್ಕೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಅವರು ಅನಂತರ ರಾಜಭವನದಲ್ಲಿ ತಂಗುವರು. ನಾಳೆ ಬೆಳಗ್ಗೆ  10.30 ಕ್ಕೆ ವಿಯಿಞಂ ಬಂದರು ಉದ್ಘಾಟನೆ ನಡೆಯಲಿದೆ. ಪ್ರಧಾನಮಂತ್ರಿಯವರು ಎಂ.ಎಸ್.ಸಿ.ಸೆಲಸ್ಟೀನೋ ಮರಸ್ಜೋ ಎಂಬ ಹಡಗನ್ನು ಬರಮಾಡಿಕೊಳ್ಳುವರು. ಅನಂತರ ಅಂತರಾಷ್ಟ್ರೀಯ ಬಂದರು ರಾಷ್ಟ್ರಕ್ಕೆ ಅಮರ್ಪಿಸುವರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಖರ್,  ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವರುಗಳಾಗ ಸದಾನಂದ ಸೋಣೋವಾಳ್, ಜಾರ್ಜ್ ಕುರ್ಯನ್, ಸುರೇಶ್ ಗೋಪಿ, ರಾಜ್ಯ ಬಂದರು ಸಚಿವ ವಿ.ಎನ್.ವಾಸವನ್, ಸಂಅದ ಶಶಿ ತರೂರು, ಗೌತಂ ಅದಾನಿ ಮೊದಲಾದವರು ಉಪಸ್ಥಿತರಿರುವರು. ಅನಂತರ ಪ್ರಧಾನಮಂತ್ರಿಯವರು ಹೈದರಾಬಾದ್ ಗೆ ತೆರಳುವರುತ

Post a Comment

0 Comments